Ultimate magazine theme for WordPress.

ನೆನಪಿದ್ಯಾ: ರಣಭೀಕರ ಅನಾಹುತಕ್ಕೂ ಮುನ್ನ ಕೊಡಗಿನಲ್ಲೂ ಕೇಳಿಸಿತ್ತು ನಿಗೂಢ ಶಬ್ದ.!

0

ಬೆಂಗಳೂರು, ಮೇ 21: ಆಗಿನ್ನೂ ಸಮಯ ಸುಮಾರು 1.20 ರಿಂದ 1.30.. ಪ್ರಶಾಂತವಾಗಿದ್ದ ಬೆಂಗಳೂರಿನಲ್ಲಿ ದಿಢೀರನೆ ಜೋರಾದ ಶಬ್ದ ಕೇಳಿಬಂತು. ಭೂಕಂಪದಂತೆ ಭಾಸವಾದ ಭಾರಿ ಶಬ್ದದಿಂದ ಬೆಂಗಳೂರಿಗರು ಅಕ್ಷರಶಃ ಬೆಚ್ಚಿಬಿದ್ದರು. ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಎಚ್.ಎಸ್.ಆರ್.ಲೇಔಟ್, ಕೆ.ಆರ್.ಪುರಂ, ಬನ್ನೇರುಘಟ್ಟದ ನಿವಾಸಿಗಳು ಭಾರಿ ಶಬ್ದದಿಂದ ನಡುಗಿದರು.

”ಬೆಂಗಳೂರಿಗರ ಆತಂಕ ಹೆಚ್ಚಿಸಿದ ಶಬ್ದವು ಭೂಕಂಪದಿಂದ ಉಂಟಾಗಿದ್ದಲ್ಲ, ಬೇರೆ ಯಾವುದೇ ಸ್ಫೋಟ ಕೂಡ ಸಂಭವಿಸಿಲ್ಲ. ಶಬ್ದಕ್ಕೆ ಕಾರಣವಾಗಿದ್ದು ಯುದ್ಧ ವಿಮಾನ” ಎಂದು ರಕ್ಷಣಾ ಇಲಾಖೆಯ ಬೆಂಗಳೂರಿನ ವಕ್ತಾರರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಆದರೆ, ರಕ್ಷಣಾ ಇಲಾಖೆ ನೀಡಿರುವ ಸ್ಪಷ್ಟನೆಯಿಂದ ಬೆಂಗಳೂರಿಗರ ಆತಂಕ ಕಡಿಮೆಯಾಗಿಲ್ಲ. ಯಾಕಂದ್ರೆ, ಬೆಂಗಳೂರಿನ ಕೆಲ ಪ್ರದೇಶದ ನಿವಾಸಿಗಳಿಗೆ ಶಬ್ದದ ಜೊತೆಗೆ ಕಂಪನದ ಅನುಭವೂ ಉಂಟಾಗಿದೆ. ಹಲವೆಡೆ ಕಟ್ಟಡಗಳು, ಕಿಟಕಿಗಳು ಅಲುಗಾಡಿವೆ.

ವಿಚಿತ್ರ ಅಂದ್ರೆ, ಬೆಂಗಳೂರಿನಲ್ಲಿ ಭೀಕರ ಶಬ್ದದ ಅನುಭವವಾದ ಬಳಿಕ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕಸಂದ್ರ ಗ್ರಾಮಸ್ಥರಿಗೂ ನಿಗೂಢ ಶಬ್ದ ಕೇಳಿಸಿದೆ. ಶಬ್ದದ ಜೊತೆಗೆ ಕಂಪನವೂ ಆಗಿದ್ದು, ಅಂಗಡಿಯ ಶೀಟುಗಳು ಅಲುಗಾಡಿವೆ.

Leave A Reply

Your email address will not be published.