Ultimate magazine theme for WordPress.

ನರೇಗಾದಿಂದ ಚಾಮರಾಜನಗರದ ಕೆರೆಗಳಿಗೆ ಮರುಜೀವ ಬಂತು

0

ಚಾಮರಾಜನಗರ, ಮೇ 22: ಸ್ಥಳೀಯ ಕೂಲಿ ಕಾರ್ಮಿಕರಿಗೆ ಕೆಲಸ ಕೊಡುವುದು ಅನಿವಾರ್ಯವಾಗಿರುವ ಕಾರಣ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ ಅವಸಾನದಂಚಿಗೆ ತಲುಪಿದ ಕೆರೆಗಳಿಗೆ ಮರುಜೀವ ಬಂದಂತಾಗಿದೆ.

ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳ ನೀರಿನ ಆಸರೆಯಾಗಿದ್ದ ಕೆರೆ ಕಟ್ಟೆಗಳು ನಂತರದ ದಿನಗಳಲ್ಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ತುತ್ತಾಗಿ ದುರಸ್ತಿಯಿಲ್ಲದೆ, ಗಿಡಗಂಟಿ ಬೆಳೆದು ಮುಚ್ಚಿ ಹೋಗಿದ್ದವು. ಜತೆಗೆ ಸಮರ್ಪಕವಾಗಿ ಮಳೆ ಬಾರದ ಕಾರಣದಿಂದ ಕೆರೆಕಟ್ಟೆಗಳಲ್ಲಿ ನೀರು ತುಂಬುತ್ತಿರಲಿಲ್ಲ. ಇದರಿಂದ ಬಹಳಷ್ಟು ಕೆರೆಗಳು ಪ್ರಭಾವಿಗಳ ಕೈಗೆ ಸಿಕ್ಕಿ ಜಮೀನು, ತೋಟಗಳಾಗಿದ್ದರೆ, ಮತ್ತೆ ಕೆಲವು ಗೋಮಾಳಗಳಾಗಿದ್ದವು.

ಕಾಲಕ್ಕೆ ತಕ್ಕಂತೆ ಕೆರೆಗಳಲ್ಲಿ ತುಂಬುವ ಹೂಳನ್ನು ತೆಗೆದು ದುರಸ್ತಿಗೊಳಿಸಿದ್ದರೆ ಕೆರೆಗಳು ಪಾಳು ಬೀಳುತ್ತಿರಲಿಲ್ಲ. ಆದರೆ ಹೂಳು ತೆಗೆದು ಕೆರೆಯ ಹದ್ದು ಬಸ್ತು ಗುರುತಿಸಿ, ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡದ ಕಾರಣದಿಂದಾಗಿ ಕೆರೆಗಳು ಅವಸಾನದ ಅಂಚಿಗೆ ತಲುಪಿದ್ದವು. ಇತ್ತೀಚೆಗಿನ ವರ್ಷಗಳಲ್ಲಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಂದ ಬಳಿಕ ಬರಡಾಗಿದ್ದ ಬಹಳಷ್ಟು ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಕೆರೆಗಳ ಅಸ್ತಿತ್ವ ಉಳಿದುಕೊಂಡಿದೆ. ಜತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟವೂ ಹೆಚ್ಚಾಗಿದೆ.

Leave A Reply

Your email address will not be published.