ನವದೆಹಲಿ, ಮೇ 21: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಗೀತಾ ಡಿಂಗ್ರಾ ಸೆಹಗಲ್ ರಾಜೀನಾಮೆ ನೀಡಿದ್ದಾರೆ ಎಂದು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ರಾಜಿಂದರ್ ಕಶ್ಯಪ್ ತಿಳಿಸಿದ್ದಾರೆ.
ಸಂವಿಧಾನದ ವಿಧಿ 217ರ ಪ್ರಕಾರ ಸಂಗೀತಾ ಅವರು ರಾಜೀನಾಮೆ ನೀಡಿದ್ದು, ಮೇ 30ರಿಂದ ಅವರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸಂಗೀತಾ ಅವರು ಡಿಂಗ್ರಾ ಅವರು ದೆಹಲಿ ಗ್ರಾಹಕ ನ್ಯಾಯಾಲಯದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸಂಗೀತಾ ಅವರು 2014ರ ಡಿಸೆಂಬರ್ 15 ರಂದು ದೆಹಲಿ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2016ರ ಜೂನ್ 2 ರಂದು ಪೂರ್ಣಾವಧಿ ಜಡ್ಜ್ ಆಗಿ ಅಧಿಕಾರ ಸ್ವೀಕರಿಸಿದ್ದರು. 2020ರ ಜೂನ್ 20ರವರೆಗೆ ಅವದ ಅಧಿಕಾರಾವಧಿ ಇತ್ತು.