Ultimate magazine theme for WordPress.

ದೆಹಲಿಯಲ್ಲಿ ಲಾಕ್ ಡೌನ್‌ ವಿನಾಯಿತಿ; ರಾಜ್ಯದ ಗಡಿಗಳು ಬಂದ್

0

ನವದೆಹಲಿ, ಜೂನ್ 01 : ಲಾಕ್ ಡೌನ್ ನಿಯಮದಲ್ಲಿ ಹಲವು ವಿನಾಯಿತಿಗಳನ್ನು ದೆಹಲಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಮುಂದಿನ ಏಳು ದಿನಗಳ ತನಕ ರಾಜ್ಯದ ಗಡಿಗಳನ್ನು ಮುಚ್ಚಲಾಗಿದೆ. ಅಗತ್ಯ ವಸ್ತು, ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದರು. “ಇದುವರೆಗೂ ಅವಕಾಶ ನೀಡಿರುವ ವಾಣಿಜ್ಯ ಚಟುವಟಿಕೆಗಳ ಜೊತೆಗೆ ಬಾರ್ಬರ್ ಶಾಪ್, ಸಲೂನ್ ತೆರೆಯಲು ಅವಕಾಶ ನೀಡಲಾಗಿದೆ” ಎಂದು ಹೇಳಿದರು.

“ಇದುವರೆಗೂ ಸಮ-ಬೆಸ ಮಾದರಿಯಲ್ಲಿ ನಾವು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದೆವು. ಆದರೆ. ಕೇಂದ್ರ ಸರ್ಕಾರ ಇಂತಹ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಇದರಿಂದಾಗಿ ಎಲ್ಲಾ ಅಂಗಡಿಗಳು ಈಗ ಬಾಗಿಲು ತೆರಯಬಹುದು” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

“ದೆಹಲಿ ಗಡಿಯನ್ನು ಏಳು ದಿನಗಳ ಅವಧಿಗೆ ಮುಚ್ಚಲಾಗಿದೆ. ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶ ನೀಡಲಾಗಿದೆ. ಒಂದು ವಾರದ ಬಳಿಕ ಗಡಿಗಳನ್ನು ಪುನಃ ತೆರೆಯುವ ಕುರಿತು ತೀರ್ಮಾನವನ್ನು ಕೈಗೊಳ್ಳುತ್ತೇವೆ” ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.

Leave A Reply

Your email address will not be published.