ನವದೆಹಲಿ, ಜೂನ್ 8: ದೆಹಲಿಯಲ್ಲಿ ಮತ್ತೆ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿದೆ.
ದೆಹಲಿಯಿಂದ 13 ಕಿ.ಮೀ ದೂರದ ಗುರುಗ್ರಾಮ ಗಡಿಯಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಹಾಗೆಯೇ 18 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಏಪ್ರಿಲ್ನಿಂದ ಜೂನ್ವರೆಗೆ ದೆಹಲಿ-ಎನ್ಸಿಆರ್ನಲ್ಲಿ 14 ಬಾರಿ ಭೂಕಂಪ ಸಂಭವಿಸಿದೆ.
ಜೂನ್ 3 ರಂದು ಕೂಡ ದೆಹಲಿಯ ಸುತ್ತಮುತ್ತಲ ಪ್ರದೇಶದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿತ್ತು.ಮೇ 29 ರಂದು ರಾತ್ರಿ 9.08 ಕ್ಕೆ ಪೂರ್ವ ಹರಿಯಾಣ ಮತ್ತು ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್ಸಿಆರ್) ಕೆಲವು ಭಾಗಗಳನ್ನು ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪ ದಾಖಲಾಗಿತ್ತು.