Ultimate magazine theme for WordPress.

ದಿನದ ಪಾಸ್ ದರ ತಗ್ಗಿಸಲು ಬಿಎಂಟಿಸಿ ಚಿಂತನೆ: ಟಿಕೆಟ್ ಆರಂಭ ಯಾವಾಗ?

0

ಬೆಂಗಳೂರು, ಮೇ 25: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿನದ ಪಾಸ್ ದರವನ್ನು ತಗ್ಗಿಸಲು ಚಿಂತನೆ ನಡೆಸಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ನಗರದಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಬಿಎಂಟಿಸಿ ಬಸ್ ಸಂಚಾರ ನಿಂತು ಹೋಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆ ಬಳಿಕ ಪುನರಾರಂಭಗೊಂಡಿದೆ. ಆದರೆ ಕೆಲ ದಿನಗಳ ಕಾಲ ಟಿಕೆಟ್ ನೀಡದಿರಲು ಬಿಎಂಟಿಸಿ ನಿರ್ಧರಿಸಿ, ಕೇವಲ ದಿನದ ಪಾಸು ಹಾಗೂ ವಾರದ ಪಾಸನ್ನು ನೀಡುತ್ತಿದೆ. ಹೀಗಾಗಿ ಪ್ರಯಾಣಿಕರು ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಹತ್ತು ವರ್ಷದೊಳಗಿನ ಮಕ್ಕಳು ಹಾಗೂ ವೃದ್ಧರು ಬಸ್‌ನಲ್ಲಿ ಸಂಚರಿಸಬೇಡಿ ಎಂದು ಹೇಳಲಾಗಿತ್ತು.

ಮೇ 26ರಿಂದ BMTC ಬಸ್ ಗಳಲ್ಲಿ ಟಿಕೆಟ್ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಎಂಟಿಸಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ಮಂಗಳವಾರದಿಂದ ಟಿಕೆಟ್ ನೀಡಲಿದೆ. ಪಾಸ್ ಬದಲು ಟಿಕೆಟ್ ನೀಡಲು ನಿರ್ಧಾರ ಮಾಡಿದೆ

ಸ್ಲಾಬ್ ರೀತಿಯಲ್ಲಿ ಟಿಕೆಟ್ ದರ ಫಿಕ್ಸ್. 5 ರೂ, 10 ರೂ, 15, 20, 25 ರೂ ಮಾದರಿಯಲ್ಲಿ ಟಿಕೆಟ್ ನೀಡಲಿರುವ ಬಿಎಂಟಿಸಿ. ಚಿಲ್ಲರೆ ಸಮಸ್ಯೆ, ಪದೇ ಪದೇ ಕೈ ಬದಲಾವಣೆ ಮಾಡುವುದು ತಪ್ಪಿಸಲು ಸ್ಲಾಬ್ ಮಾದರಿ ಟಿಕೆಟ್ ನೀಡಲಿರುವ ಬಿಎಂಟಿಸಿ.

Leave A Reply

Your email address will not be published.