ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಡಿ ಬಾಸ್. ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ಗೆ ಸುಲ್ತಾನ್. ಕನ್ನಡ ಇಂಡಸ್ಟ್ರಿಯಲ್ಲಿ ಪ್ರಸ್ತುತ ಯಜಮಾನ ಎಂದು ಕರೆಸಿಕೊಳ್ಳುವ ನಟ ದರ್ಶನ್ ವೃತ್ತಿ ಜೀವನಕ್ಕೆ ಎರಡು ದಶಕದ ಸಂಭ್ರಮ. ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿರುವ ದಾಸ, ಆರಂಭದಲ್ಲಿ ಕೆಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
‘ಮೆಜೆಸ್ಟಿಕ್’ ಚಿತ್ರದ ಮೂಲಕ ಗಾಂಧಿನಗರದಲ್ಲಿ ಸವಾರಿ ಹೊರಟ ದರ್ಶನ್ ನೋಡು ನೋಡುತ್ತಿದ್ದಂತೆ ಐರಾವತ ಆಗಿ ಬೆಳೆದು ನಿಂತಿದ್ದಾರೆ. ಮಾಸ್ ಕಿಂಗ್ ಎನಿಸಿಕೊಂಡಿರುವ ದರ್ಶನ್ ಒಬ್ಬ ಪರಿಪೂರ್ಣ ನಟ. ಎಲ್ಲ ರೀತಿಯ ಪಾತ್ರಗಳನ್ನು ನಿಭಾಯಿಸಬಲ್ಲ ಕಲಾವಿದ. ದರ್ಶನ್ ಅವರು ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡಿದ್ರೆ ಈ ಆರು ಚಿತ್ರಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾವುದು ಆರು ಸಿನಿಮಾ? ಮುಂದೆ ಓದಿ…