Ultimate magazine theme for WordPress.

ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ನನ್ನ ಪಕ್ಷ ಕಾಪಾಡುತ್ತದೆ; ರಾಹುಲ್ ಗಾಂಧಿ

0

ನವದೆಹಲಿ, ಜನವರಿ 23: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಸಲುವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರದಿಂದ ಮೂರು ದಿನಗಳ ಕಾಲ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.

ಟ್ವಿಟ್ಟರ್ ನಲ್ಲಿ ಈ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ಹಂಚಿಕೊಂಡಿದ್ದು, “ತಮಿಳುನಾಡಿಗೆ ಭೇಟಿ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕೊಂಗು ಪ್ರದೇಶದ ನನ್ನ ಸಹೋದರ ಸಹೋದರಿಯರೊಂದಿಗೆ ಸಮಯ ಕಳೆಯಬೇಕೆಂದುಕೊಂಡಿದ್ದೇನೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದಾಳಿಯಿಂದ ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ನಾನು ಹಾಗೂ ನನ್ನ ಪಕ್ಷ ರಕ್ಷಿಸುತ್ತದೆ” ಎಂದು ಹೇಳಿದ್ದಾರೆ.

ತಿಂಗಳಿನಲ್ಲಿ ರಾಹುಲ್ ಗಾಂಧಿ ಎರಡನೇ ಭೇಟಿ ಇದಾಗಿದ್ದು, ಈ ಬಾರಿ ಭೇಟಿ ಸಂದರ್ಭ ವಿಧಾನ ಸಭೆ ಚುನಾವಣೆಗೆ ಪಕ್ಷದ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿ ತಿಳಿದುಬಂದಿದೆ. ಇಲ್ಲಿನ ಕಲಪಟ್ಟಿಯ ನೆಹರು ನಗರದ ಸುಗುಣಾ ಆಡಿಟೋರಿಯಂನಲ್ಲಿ ರೈತರು, ಎಂಎಸ್ ಎಂಇ ಪ್ರತಿನಿಧಿಗಳು, ಕಾರ್ಮಿಕರು, ನೇಕಾರರೊಂದಿಗೆ ಸಂವಾದ ನಡೆಸುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.

Leave A Reply

Your email address will not be published.