Ultimate magazine theme for WordPress.

ಡಿಜಿಟಲ್​ ವೇದಿಕೆ ಹತ್ತಿದ ಪುನೀತ್​ ನಿರ್ಮಾಣದ ಚಿತ್ರಗಳು; ಅಷ್ಟಕ್ಕೂ ಪವರ್​ ಸ್ಟಾರ್​ ಈ ನಿರ್ಧಾರ ಕೈಗೊಂಡಿದ್ದೇಕೆ?

0

ಕೊರೋನಾ ವೈರಸ್​ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್​ಡೌನ ಹೇರಲಾಗಿದೆ. ಇದರಿಂದ ದೊಡ್ಡ ಸ್ಟಾರ್ಗಳ ಸಿನಿಮಾಗಳಿಗೆ ಅಂತಹಾ ಪರಿಣಾಮ ಆಗಿಲ್ಲ ಅಂತಲೇ ಬಹುತೇಕರು ಭಾವಿಸಿದ್ದರು. ಆದರೆ ಸ್ಯಾಂಡಲ್ವುಡ್ ಪವರ್ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಸಿನಿಮಾನೇ ಲಾಕ್​ಡೌನ್ ಎಫೆಕ್ಟ್​​ನಿಂದ ಕಂಗಾಲಾಗಿದೆ. ಲಾಕ್​ಡೌನ್ ಮುಗಿದು, ಸಿನಿಮಾ ರಿಲೀಸ್ ಮಾಡುವಷ್ಟರಲ್ಲಿ ಮತ್ತಷ್ಟು ಲಕ್ಷ ಹಣ ಕೈಬಿಡುವ ಆತಂಕದಲ್ಲಿ ಅಪ್ಪು ಸಿನಿಮಾಗಳು ನೇರವಾಗಿ ಡಿಜಿಟಲ್ ಪ್ಲಾಟ್ಫಾರ್ಮ್​​ನಲ್ಲಿ ರಿಲೀಸ್ ಆಗಲು ರೆಡಿಯಾಗಿವೆ.

ಹೌದು, ಕವಲುದಾರಿ, ಮಾಯಾಬಜಾರ್ ಬಳಿಕ ಪುನೀತ್ ರಾಜ್ಕುಮಾರ್ ಹಾಗೂ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಪಿಆರ್​​ಕೆ ಪ್ರೊಡಕ್ಷನ್ಸ್ ಬ್ಯಾನರ್ನ ಅಡಿಯಲ್ಲಿ ನಿರ್ಮಾಣವಾಗಿರುವ ಸಿನಿಮಾಗಳು ಲಾ ಮತ್ತು ಫ್ರೆಂಚ್ ಬಿರಿಯಾನಿ. ಈಗ ಈ ಎರಡೂ ಸಿನಿಮಾಗಳು ಥಿಯೇಟರ್ಗಳಲ್ಲಿ ತೆರೆಗೆ ಬಾರದೇ ನೇರವಾಗಿ ಓಟಿಟಿ ಪ್ಲಾಟ್​​ಫಾರ್ಮ್​​ನಲ್ಲಿ ರಿಲೀಸ್ ಆಗುತ್ತಿವೆ.

ರಘು ಸಮರ್ಥ್ ನಿರ್ದೇಶನದ ಲಾ ಚಿತ್ರದಲ್ಲಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್, ಸಿರಿ ಪ್ರಹ್ಲಾದ್, ಮುಖ್ಯಮಂತ್ರಿ ಚಂದ್ರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತಾಗಿದ್ರೆ ಈ ಸಿನಿಮಾ ಕಳೆದ ತಿಂಗಳೇ ತೆರೆಗೆ ಬರಬೇಕಿತ್ತು. ಆದರೆ ಲಾಕ್​ಡೌನಿಂದಾಗಿ ಪೋಸ್ಟ್​ಪೋನ್ ಆಗಿತ್ತು. ಈಗ ಇದೇ ಜೂನ್ 26ರಂದು ನೇರವಾಗಿ ಅಮೇಜಾನ್ ಪ್ರೈಮ್​ನಲ್ಲಿ ಲಾ ರಿಲೀಸ್ ಆಗುತ್ತಿದೆ. ಆ ಮೂಲಕ ನೇರವಾಗಿ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್ ಆದ ಮೊದಲ ಕನ್ನಡ ಸಿನಿಮಾ ಅನ್ನೋ ದಾಖಲೆ ಬರೆಯಲಿದೆ.

Leave A Reply

Your email address will not be published.