Ultimate magazine theme for WordPress.

ಡಿಕೆಶಿ ಪದಗ್ರಹಣಕ್ಕೆ ಮತ್ತೊಂದು ಮಹೂರ್ತ: ಈ ಬಾರಿಯಾದರೂ ಸರಕಾರ ಅನುಮತಿ ನೀಡುತ್ತಾ?

0

ಬೆಂಗಳೂರು, ಜೂನ್ 6: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣಕ್ಕೆ ಮತ್ತೊಂದು ದಿನವನ್ನು ನಿಗದಿ ಮಾಡಲಾಗಿದೆ. ಜೂನ್ 14ರಂದು ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಪದಗ್ರಹಣ ಮಾಡಲು ನಿಗದಿ ಪಡಿಸಿದ ಮೂರನೇ ದಿನಾಂಕ ಇದಾಗಿದೆ. ಮೊದಲು, ಮೇ 24ಕ್ಕೆ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದರು. ಆದರೆ, ಭಾನುವಾರದ ಕರ್ಫ್ಯೂ ಇದ್ದಿದ್ದರಿಂದ ಇದು ರದ್ದಾಗಿತ್ತು.

ಇದಾದ ನಂತರ, ಜೂನ್ ಏಳರಂದು ಪದಗ್ರಹಣ ಮಾಡಬೇಕಿತ್ತು. ಆದರೆ, ಜೂನ್ ಎಂಟರವರೆಗೆ, ರಾಜಕೀಯ ಸಭೆ ನಡೆಸಲು ಕೇಂದ್ರದ ಅನುಮತಿ ಇಲ್ಲ ಎನ್ನುವ ಕಾರಣಕ್ಕಾಗಿ ಇದು ಕ್ಯಾನ್ಸಲ್ ಆಗಿತ್ತು.

Leave A Reply

Your email address will not be published.