Ultimate magazine theme for WordPress.

ಟೆಲಿಕಾಂ ಟವರ್ ಧ್ವಂಸ ಘಟನೆ ತೀವ್ರವಾಗಿ ಖಂಡಿಸಿದ ಸಿಒಎಐ

0

ನವದೆಹಲಿ, ಡಿಸೆಂಬರ್ 30: ಕೇಂದ್ರ ಕೃಷಿ ಕಾನೂನು ವಿರೋಧಿಸಿ ಪಂಜಾಬ್ ನಲ್ಲಿ ಪ್ರತಿಭಟನೆ ರೂಪವಾಗಿ 1500ಕ್ಕೂ ಹೆಚ್ಚು ಮೊಬೈಲ್ ಟವರ್ ಗಳನ್ನು ಮತ್ತು ಟೆಲಿಕಾಂ ನೆಟ್ ವರ್ಕ್ ಮೂಲಸೌಕರ್ಯ ನಾಶಗೊಳಿಸಿದ ಕ್ರಮವನ್ನು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಖಂಡಿಸಿದೆ.

ಲಕ್ಷಾಂತರ ಗ್ರಾಹಕರ ಪಾಲಿಗೆ ಟೆಲಿಕಾಂ ಸೇವೆ “ಜೀವನಾಡಿ’ ಇದ್ದಂತೆ ಎಂದಿರುವ ಸಿಒಎಐನ ಮಹಾ ನಿರ್ದೇಶಕ ಎಸ್.ಪಿ. ಕೊಚ್ಚರ್, ಟೆಲಿಕಾಂ ಸೇವೆ ವ್ಯತ್ಯಯದಿಂದಾಗಿ ಜನ ಸಾಮಾನ್ಯರಿಗೆ ಬಹಳ ಸಮಸ್ಯೆಯಾಗುತ್ತಿದೆ. ಇದು “ಅಗತ್ಯ ಸೇವೆಗಳಲ್ಲಿ” ಒಂದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ಯಾವುದೇ ವಿಚಾರಕ್ಕೆ ಪ್ರತಿಭಟನೆ ಮಾಡುವ ಹಕ್ಕನ್ನು ನಾವು ಗೌರವಿಸುತ್ತೇವೆ. ಟೆಲಿಕಾಂ ನೆಟ್ ವರ್ಕ್ ಮೂಲಸೌಕರ್ಯವನ್ನು ನಾಶ ಪಡಿಸುವುದು ಹಾಗೂ ಪ್ರತಿಭಟನೆ ರೂಪದಲ್ಲಿ ಟೆಲಿಕಾಂ ಸೇವೆಗೆ ಅಡೆತಡೆ ಮಾಡುವುದನ್ನು ಬಲವಾಗಿ ಖಂಡಿಸುತ್ತೇವೆ,” ಎಂದು ಸಿಒಎಐ ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.