Ultimate magazine theme for WordPress.

ಜೆಒಸಿ ಉಪನ್ಯಾಸಕರ ಕುರಿತು ಸುರೇಶ್ ಕುಮಾರ್ ಮಹತ್ವದ ತೀರ್ಮಾನ!

0

ಬೆಂಗಳೂರು, ಜ. 23: ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ತರಬೇತಿ ನೀಡುವ ಹಿನ್ನೆಲೆಯಲ್ಲಿ ಸ್ಥಾಪನೆ ಮಾಡಲಾಗಿದ್ದ ಜೆಒಸಿ (ಜಾಬ್ ಓರಿಎಂಟೆಡ್ ಕೋರ್ಸ್) ವಿವಿಧ ಕಾರಣಗಳಿಂದ ಬಂದ್ ಮಾಡಲಾಗಿದೆ. ಜೆಒಸಿ ತರಬೇತಿಗೆ ನೇಮಕ ಮಾಡಿಕೊಳ್ಳಲಾಗಿದ್ದ ಉಪನ್ಯಾಸಕರ ಸ್ಥಿತಿ ಅತಂತ್ರವಾಗಿದೆ. ವಿವಿಧ ಇಲಾಖೆಗಳಿಗೆ ಅವರನ್ನು ಡೆಪ್ಯೂಟೇಶನ್ ಮೂಲಕ ವರ್ಗಾವಣೆ ಮಾಡಲಾಗಿದೆ. ಜೆಒಸಿ ಸಿಬ್ಬಂದಿ ಸಮಸ್ಯೆಗಳ ಪರಿಹಾರಕ್ಕೆ ಇದೀಗ ಕಾಲ ಕೂಡಿ ಬಂದಿದೆ.

ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಹಿಂದಿನ ವೃತ್ತಿ ಶಿಕ್ಷಣ-ಜೆಒಸಿ ಶಿಕ್ಷಕರ ಸಮಸ್ಯೆಗಳಿಗೆ ಒಂದು ಬಾರಿ ಇತಿಶ್ರೀ ಹಾಡಿ ಅವರಿಗೆ ಅನುಕೂಲ ಮಾಡಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಸಭೆಯಲ್ಲಿ ವಿಲೀನಗೊಂಡ ವೃತ್ತಿಶಿಕ್ಷಕರ ಉಳಿದ ಬೇಡಿಕೆಗಳ ಕುರಿತ ಚರ್ಚೆಯ ನಂತರ ಮಾತನಾಡಿದ ಅವರು, ಕೆಲವೇ ಮಂದಿ ಜೆಒಸಿ ಶಿಕ್ಷಕರ ಕೆಲ ಬೇಡಿಕೆಗಳು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದು, ಸಾಧ್ಯವಾಗಬಹುದಾದ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಹತ್ವದ ಭರವಸೆ ನೀಡಿದ್ದಾರೆ.

Leave A Reply

Your email address will not be published.