Ultimate magazine theme for WordPress.

ಜುಲೈ 1ರಿಂದ ಐಸಿಎಸ್‌ಇ ಹಾಗೂ ಐಎಸ್‌ಸಿ ಪರೀಕ್ಷೆಗಳು ಆರಂಭ

0

ನವದೆಹಲಿ,ಮೇ 22: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ 10ನೇ ತರಗತಿ ಐಸಿಎಸ್‌ಇ ಹಾಗೂ ಐಎಸ್‌ಸಿ 12ನೇ ತರಗತಿ ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ.
ಜುಲೈ 1ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ. 10ನೇ ತರಗತಿಯ ಉಳಿದಿರುವ ವಿಷಯಗಳ ಪರೀಕ್ಷೆ ಜುಲೈ 2 ರಿಂದ 12ರವರೆಗೆ ನಡೆಯಲಿದ್ದರೆ , 12ನೇ ತರಗತಿ ಪರೀಕ್ಷೆ ಜುಲೈ 1ರಿಂದ 14ರವರೆಗೆ ನಡೆಯಲಿದೆ.
10ನೇ ತರಗತಿ ಪರೀಕ್ಷೆ ವೇಳಾಪಟ್ಟಿ:

-ಜುಲೈ 2ರ ಬೆಳಗ್ಗೆ 11ಕ್ಕೆ ಭೂಗೋಳಶಾಸ್ತ್ರ ಎಚ್‌ಸಿಜಿ ಎರಡನೇ ಪೇಪರ್

-ಜುಲೈ 4ರ ಬೆಳಗ್ಗೆ 11ಕ್ಕೆ ಆರ್ಟ್ ಪೇಪರ್ 4(ಅಪ್ಲೈಡ್ ಆರ್ಟ್)

-ಜುಲೈ 6ರ ಬೆಳಗ್ಗೆ 11ಕ್ಕೆ (ಗ್ರೂಪ್ 3 ಎಲೆಕ್ಟಿವ್), ಕರ್ನಾಟಕ ಸಂಗೀತ,ಕಮರ್ಷಿಯಲ್ ಅಪ್ಲಿಕೇಷನ್ಸ್, ಕಂಪ್ಯೂಟರ್ ಅಪ್ಲಿಕೇಷನ್ಸ್, ಕುಕರಿ, ನಾಟಕ, ಎಕನಾಮಿಕ್ಸ್ ಅಪ್ಲಿಕೇಷನ್ಸ್, ಎನ್ವಿರಾನ್‌ಮೆಂಟಲ್ ಅಪ್ಲಿಕೇಷನ್ಸ್, ಫ್ಯಾಶನ್ ಡಿಸೈನಿಂಗ್ , ಫ್ರೆಂಚ್, ಜರ್ಮನ್, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹೋ ಸೈನ್ಸ್, ಇಂಡಿಯನ್ ಡ್ಯಾನ್ಸ್, ಮಾಸ್ ಮೀಡಿಯಾ ಕಮ್ಯುನಿಕೇಷನ್ಸ್, ಫಿಜಿಕಲ್ ಎಜುಕೇಷನ್, ವೆಸ್ಟರ್ನ್ ಮ್ಯೂಸಿಕ್, ಯೋಗ, ಟೆಕ್ನಿಕಲ್ ಡ್ರಾಯಿಂಗ್ ಅಪ್ಲಿಕೇಷನ್ಸ್.

-ಜುಲೈ 8 ರಂದು ಬೆಳಗ್ಗೆ 11 ಕ್ಕೆ ಹಿಂದಿ

-ಜುಲೈ 10ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ-ವಿಜ್ಞಾನ 3ನೇ ಪೇಪರ್

-ಜುಲೈ 12ರ ಬೆಳಗ್ಗೆ 11ಕ್ಕೆ ಎಕನಾಮಿಕ್ಸ್(ಗ್ರೂಪ್ 2 ಎಲೆಕ್ಟೀವ್)

12ನೇ ತರಗತಿ ವೇಳಾಪಟ್ಟಿ -ಜುಲೈ 1 ರಂದು ಬೆಳಗ್ಗೆ 11ಕ್ಕೆ ಜೀವಶಾಸ್ತ್ರ(1ನೇ ಪೇಪರ್) -ಜುಲೈ 3ರ ಬೆಳಗ್ಗೆ 11ಕ್ಕೆ ಬಿಜಿನೆಸ್ ಸ್ಟಡೀಸ್ -ಜುಲೈ 5ರ ಬೆಳಗ್ಗೆ 11ಕ್ಕೆ ಭೂಗೋಳ ಶಾಸ್ತ್ರ -ಜುಲೈ 7 ರಂದು ಬೆಳಗ್ಗೆ 11ಕ್ಕೆ ಮನಃಶಾಸ್ತ್ರದಲ್ಲಿ -ಜುಲೈ 9 ರಂದು ಬೆಳಗ್ಗೆ 11ಕ್ಕೆ ಸಮಾಜಶಾಸ್ತ್ರ -ಜುಲೈ 11 ರಂದು ಬೆಳಗ್ಗೆ 11ಕ್ಕೆ ಹೋಂ ಸೈನ್ಸ್(1ನೇ ಪೇಪರ್) -ಜುಲೈ 13ರ ಬೆಳಗ್ಗೆ 11ಕ್ಕೆ ಎಲೆಕ್ಟಿವ್ ಇಂಗ್ಲಿಷ್ -ಜುಲೈ 14 ರಂದು ಬೆಳಗ್ಗೆ 11ಕ್ಕೆ ಆರ್ಟ್5-ಕ್ರಾಫ್ಟ್‌

Leave A Reply

Your email address will not be published.