ವಾಷಿಂಗ್ಟನ್, ಫೆಬ್ರವರಿ 20: ಜಿ 7 ಶೃಂಗಸಭೆಗೆ ರಷ್ಯಾ ಆಹ್ವಾನಿಸುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೈಬಿಡುತ್ತಿರುವುದಾಗಿ ಶ್ವೇತಭವನ ಮೂಲಗಳು ತಿಳಿಸಿವೆ.
ರಷ್ಯಾಗೆ ಹೊಸ ಆಹ್ವಾನ ನೀಡುವ ಕುರಿತು ನಮಗೆ ಯಾವುದೇ ಆಲೋಚನೆಯಿಲ್ಲ ಎಂದು ಜೋಬೈಡನ್ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ. ಕಳೆದ ವರ್ಷ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಆಲೋಚನೆಗೆ ಬೆಂಬಲ ನೀಡಿದ್ದರು. ಕ್ರಿಮಿಯಾ ಪ್ರದೇಶವನ್ನು ನೆರೆಯ ಉಕ್ರೇನ್ನಿಂದ ವಶಪಡಿಸಿಕೊಂಡ ನಂತರ ರಷ್ಯಾವನ್ನು 2014ರಲ್ಲಿ ಅಂದಿನ ಶೃಂಗಸಭೆಯಿಂದ ಹೊರಹಾಕಲಾಗಿತ್ತು.
ಪ್ರತಿ ವರ್ಷವೂ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಕೆನಡಾ ಈ ಏಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಭೆ ಸೇರುತ್ತಿದ್ದವು. ಆರ್ಥಿಕತೆ, ಹವಾಮಾನ ವೈಪರಿತ್ಯ, ಭದ್ರತೆ ಕುರಿತು ಚರ್ಚೆ ನಡೆಸುತ್ತಿದ್ದವು.