Ultimate magazine theme for WordPress.

ಜಿಯೋದಲ್ಲಿ ಉದ್ಯೋಗ- ನಕಲಿ OLX, ಕ್ವಿಕರ್ Adಗೆ ಕೋರ್ಟ್ ತಡೆ

0

ನವದೆಹಲಿ, ಮೇ30: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಗೆ ಸಂಬಂಧಿಸಿದಂತೆ ಜಿಯೋ ಜಾಬ್ಸ್ ಮತ್ತು ರಿಲಯನ್ಸ್ ಟ್ರೆಂಡ್ಸ್ ಜಾಬ್ಸ್ (JIO Jobs’ and Reliance Trends Jobs) ಎಂಬ ಪದಗಳನ್ನು ಬಳಸುವ ಮೂಲಕ ನಕಲಿ ಮತ್ತು ಮೋಸದ ನೇಮಕಾತಿ ಜಾಹೀರಾತುಗಳನ್ನು ಒಎಲ್ಎಕ್ಸ್ ಮತ್ತು ಕ್ವೀಕಆರ್ ಕಂಪನಿಗಳು ತಮ್ಮ ವೆಬ್ ಪೋರ್ಟಲ್ ಗಳಲ್ಲಿ ಪೋಸ್ಟ್ ಮಾಡಿದ್ದನ್ನು ಹಿಂಪಡೆಯುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಈ ರೀತಿಯ ನಕಲಿ ಜಾಹೀರಾತುಗಳನ್ನು ಪ್ರಕಟಿಸುವುದರಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಪಖ್ಯಾತಿ ಉಂಟಾಗುತ್ತದೆ ಎಂದಿದೆ.

ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ಎರಡು ಪ್ರತ್ಯೇಕ ಮಧ್ಯಂತರ ಆದೇಶಗಳಲ್ಲಿ, ಆರ್ ಐಎಲ್ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಪ್ರಕರಣವೊಂದನ್ನು ದಾಖಲಿಸಿ ಮಧ್ಯಂತರ ತಡೆಯಾಜ್ಞೆಯನ್ನು ನೀಡಬೇಕು ಹಾಗೂ ನಷ್ಟವನ್ನು ಭರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಟ್ರೇಡ್ ಮಾರ್ಕ್ ವ್ಯಾಪಾರ ಹೆಸರುಗಳಾದ JIO ಮತ್ತು RELIANCE ಗಳ ಮಾಲೀಕರು RIL ಎಂದು ಹೈಕೋರ್ಟ್ ಗುರುವಾರ ಎರಡು ಮೊಕದ್ದಮೆಗಳಲ್ಲಿ ಆದೇಶಗಳನ್ನು ನೀಡಿದೆ. ಪ್ರತಿವಾದಿಗಳದ OLX India BV, OLX India Pvt Ltd ಮತ್ತು Quikr India Pvt Ltd ಗಳು RIL ಅಭಿಮಾನ ಮತ್ತು ಖ್ಯಾತಿಗೆ ಅಪಾರ ಹಾನಿ ಮತ್ತು ಸರಿಪಡಿಸಲಾಗದ ಹೊಡೆತ ನೀಡಿವೆ ಎಂದಿದ್ದಾರೆ.

Leave A Reply

Your email address will not be published.