Ultimate magazine theme for WordPress.

ಚಿರಂಜೀವಿ ಸರ್ಜಾ ಅಕಾಲಿಕ ಸಾವು: ಜಾತಕ ದೋಷದ ಬಗ್ಗೆ ಜೋತಿಷಿ ಅಮ್ಮಣ್ಣಾಯ ಹೇಳಿದ್ದೇನು?

0

ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಮೂಡಿಸಿರುವ ಆಘಾತ ಸಣ್ಣದೇನಲ್ಲ. ಚಿತ್ರರಂಗ ಮಾತ್ರವಲ್ಲ, ಜನಸಾಮಾನ್ಯರನ್ನೂ ಈ ಅಗಲಿಕೆ ತೀವ್ರವಾಗಿ ಕಾಡುತ್ತಿದೆ. ಚಿರಂಜೀವಿ ಸರ್ಜಾ ಅಗಲಿಕೆಯ ಬೆನ್ನಲ್ಲೇ ನಟ ಜಗ್ಗೇಶ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದರು.

ತನ್ನ ಹಾಗೂ ಮೇಘನಾ ಮದುವೆಗೆ ಸಹಾಯ ಮಾಡುವಂತೆ ಚಿರಂಜೀವಿ ಸರ್ಜಾ ಫೋನ್ ಮಾಡಿ ಕೇಳಿದ್ದರು. ಹಾಗಾಗಿ ಚಿರಂಜೀವಿ ಹಾಗೂ ಮೇಘನಾ ರಾಜ್ ಅವರ ಜಾತಕವನ್ನು ಖ್ಯಾತ ಜೋತಿಷಿಯಾದ ಪ್ರಕಾಶ್ ಅಮ್ಮಣ್ಣಾಯ ಅವರ ಬಳಿ ತೆಗೆದುಕೊಂಡು ಹೋಗಿ ತೋರಿಸಿದ್ದೆ. ಜಾತಕದಲ್ಲಿ ಅಷ್ಟಮ ಕುಜ ದೋಷವಿದೆ. ಇದನ್ನು ಪರಿಹಾರ ಮಾಡಿಸಿಕೊಳ್ಳಬೇಕು. ಪೂಜೆ ಮಾಡಿಸಿ ಪರಿಹಾರ ಮಾಡಿಸಿಕೊಳ್ಳಿ ಎಂಬುದಾಗಿ ಜೋತಿಷಿ ಪ್ರಕಾಶ್ ಅಮ್ಮಣ್ಣಾಯ ಸೂಚಿಸಿದ್ದರು. ಆದರೆ ನಂತರ ಪರಿಹಾರ ಮಾಡಿಸಿದ್ದರೇ ಎಂಬುದು ತಿಳಿದಿರಲಿಲ್ಲ ಎಂದು ಜಗ್ಗೇಶ್ ಹೇಳಿದ್ದರು. ಇದರ ಬಗ್ಗೆ ಸ್ವತಃ ಜೋತಿಷಿ ಪ್ರಕಾಶ್ ಅಮ್ಮಣ್ಣಾಯ ‘ಫಿಲ್ಮಿ ಬೀಟ್’ ಜತೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ…

ಚಿರಂಜೀವಿ ಮತ್ತು ಮೇಘನಾ ಅವರ ಜಾತಕಗಳನ್ನು ನನ್ನ ಬಳಿ ತಂದಿದ್ದರು. ಅದರಲ್ಲಿ ದೋಷ ಇತ್ತು. ವಿಚ್ಚೇದನ ಯೋಗ ಇರುವುದು ಗೊತ್ತಾಗಿತ್ತು. ವಿಚ್ಚೇದನ ಯೋಗ ಎಂದರೆ ಡೈವೋರ್ಸ್ ಆಗಬಹುದು ಅಥವಾ ಗಂಡನ ಸಾವು ಅಥವಾ ಹೇಗೆ ಬೇಕಾದರೂ ಆಗಬಹುದು. ಅಂದರೆ ಗಂಡ ಮತ್ತು ಹೆಂಡತಿ ದೂರವಾಗುವುದು ಖಚಿತ. ನನಗೂ ಮೊದಲು ಯಾರೋ ಜೋತಿಷಿ ಹೇಳಿದ್ದರಂತೆ, ಈ ಜಾತಕಗಳು ಹೊಂದಲು ಸಾಧ್ಯವೇ ಇಲ್ಲ ಎಂದು. ಆಗ ಇವರು ಮದುವೆಯನ್ನು ನಿಲ್ಲಿಸಿದ್ದರಂತೆ.

Leave A Reply

Your email address will not be published.