ನವದೆಹಲಿ, ಡಿಸೆಂಬರ್ 31: ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಕೆಳಮಟ್ಟಕ್ಕೆ ತಲುಪಿದ್ದು, ವರ್ಷದ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಇನ್ನೂ ಎತ್ತರದ ಸ್ಥಾನದಲ್ಲಿಯೇ ಉಳಿದಿವೆ. ಎಂಸಿಎಕ್ಸ್ನಲ್ಲಿ ಚಿನ್ನದ ಭವಿಷ್ಯವು 10ಗ್ರಾಂಗೆ ಶೇಕಡಾ 0.08ರಷ್ಟು ಕುಸಿದು, 50,097 ರೂಪಾಯಿಗೆ ತಲುಪಿದೆ. ಕಳೆದ ಎರಡು ವಾರದಲ್ಲಿ ಚಿನ್ನದ ದರವು 50,000 ರೂ. ಮತ್ತು 50,500 ರೂಪಾಯಿ ವ್ಯಾಪ್ತಿಯಲ್ಲಿಯೇ ವಹಿವಾಟು ನಡೆಸುತ್ತಿದೆ.
ಜಾಗತಿಕವಾಗಿ ಹೂಡಿಕೆದಾರರು ಲಸಿಕೆ ಹೊರತಾಗಿಯೂ ವೈರಸ್ನಿಂದ ಮತ್ತೆ ಹದಗೆಡುವುತ್ತಿರುವ ಪರಿಸ್ಥಿತಿಯನ್ನು ಆಧರಿಸಿ ಮುಂದುವರಿಯುತ್ತಿದ್ದಾರೆ ಎಂದು ಕೊಟಾಕ್ ಸೆಕ್ಯುರಿಟೀಸ್ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ. ಬ್ರಿಟನ್ ಈಗಾಗಲೇ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಅಸ್ಟ್ರಾ ಜೆನೆಕಾ ಲಸಿಕೆಯನ್ನು ಅನುಮೋದಿಸಿದ ಮೊದಲ ರಾಷ್ಟ್ರವಾಗಿದೆ.