Ultimate magazine theme for WordPress.

ಚಾಮರಾಜನಗರಕ್ಕೆ ಬರಲು ತಮಿಳರು ಬಳಸುತ್ತಿದ್ದ ಕಳ್ಳದಾರಿ ಬಂದ್

0

ಚಾಮರಾಜನಗರ, ಮೇ 26: ರಾಜ್ಯದ ಎಲ್ಲ ಜಿಲ್ಲೆಗಳು ಕೊರೊನಾ ಸಂಕಷ್ಟ ಅನುಭವಿಸುತ್ತಿವೆ. ಈ ನಡುವೆ ಚಾಮರಾಜನಗರ ಜಿಲ್ಲೆ ಮಾತ್ರ ಹಸಿರು ವಲಯವಾಗಿ ಉಳಿದುಕೊಂಡಿದೆ. ಹೀಗಿರುವಾಗ ಪಕ್ಕದ ತಮಿಳುನಾಡಿನಿಂದ ಇಲ್ಲಿಗೆ ಕಾಡು ದಾರಿ ಮೂಲಕ ಕೆಲವರು ಅಕ್ರಮವಾಗಿ ಪ್ರವೇಶಿಸುತ್ತಿದ್ದದ್ದು ಭಯ ಹುಟ್ಟಿಸಿತ್ತು.

ಚಾಮರಾಜನಗರ ಜಿಲ್ಲೆಗೂ ಕೊರೊನಾ ಹರಡುವ ಭೀತಿ ಎದುರಾಗಿತ್ತು. ಆದರೆ ಈ ಬಗ್ಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಅಕ್ರಮ ಪ್ರವೇಶಕ್ಕಿದ್ದ ದಾರಿಗಳನ್ನು ಬಂದ್ ಮಾಡಿದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತೆ ಆಗಿದೆ.

ಈಗಾಗಲೇ ಚಾಮರಾಜನಗರ ಜಿಲ್ಲಾಡಳಿತ ಗ್ರಾಮ ಮಟ್ಟದಿಂದಲೇ ಕೊರೊನಾ ವಾರಿಯರ್ಸ್ ಅನ್ನು ಸಿದ್ಧ ಮಾಡಿಕೊಂಡು ಸೋಂಕಿನ ವಿರುದ್ಧ ಜಾಗೃತಿ ಮೂಡಿಸುತ್ತಾ ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸುತ್ತಿದೆ. ಹೀಗಿರುವಾಗ ತಮಿಳುನಾಡಿನ ಕೆಲವರು ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಕಾಡು ದಾರಿಗಳ ಮೂಲಕ ತಮಿಳುನಾಡಿನಿಂದ ಅಕ್ರಮವಾಗಿ ಬರುತ್ತಿದ್ದರು. ಇದು ಜನತೆಯಲ್ಲಿ ಭೀತಿಯನ್ನುಂಟು ಮಾಡಿತ್ತು.

ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಾಲಾರ್, ಹೂಗ್ಯಂ, ಜಲ್ಲಿಪಾಳ್ಯ, ಗಾಜನೂರು, ಗರಿಕೆಕಂಡಿಯ ಕಾಲುದಾರಿಗಳಲ್ಲಿ ಜನ ನಡೆದು ಬರುತ್ತಿದ್ದರು. ಇನ್ನೊಂದೆಡೆ ಪಾಲಾರ್ ನದಿಯ ಪಕ್ಕದಲ್ಲೇ ಚೆಕ್ ಪೋಸ್ಟ್ ಇದ್ದರೂ ಪೊಲೀಸರ ಕಣ್ತಪ್ಪಿಸಿ ಓಡಾಟ ನಡೆಸುತ್ತಿದ್ದರು. ವ್ಯಾಪಾರ, ವಹಿವಾಟು, ಆಸ್ಪತ್ರೆ ಮೊದಲಾದ ಕೆಲಸಗಳಿಗೆ ಕಾಡುದಾರಿಗಳ ಮೂಲಕ ಎರಡು ರಾಜ್ಯಗಳ ನಡುವೆ ಸಂಚರಿಸುವ ಮೂಲಕ ಕೊರೊನಾ ಆತಂಕ ತಂದೊಡ್ಡಿದ್ದರು.

Leave A Reply

Your email address will not be published.