Ultimate magazine theme for WordPress.

ಚಂದ್ರಬಾಬು ನಾಯ್ಡು ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಿ: ವೈಎಸ್‌ಆರ್‌ ಕಾಂಗ್ರೆಸ್ ಒತ್ತಾಯ

0

ಅಮರಾವತಿ, ಮೇ 27: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಹೇಳಿದ್ದಾರೆ.

ಸೋಮವಾರದಿಂದ ದೇಶೀಯ ವಿಮಾನಗಳು ಕಾರ್ಯಾಚರಿಸುತ್ತಿದ್ದರೂ ರಸ್ತೆಯ ಮೂಲಕ ತೆಲಂಗಾಣಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಎರಡು ತಿಂಗಳ ನಂತರ ಮೊದಲ ಬಾರಿಗೆ ಹೈದರಾಬಾದಿಗೆ ಆಗಮಿಸಿದ್ದಾರೆ. ಟಿಡಿಪಿ ಅಧ್ಯಕ್ಷ ಗಡಿಕೋಟ ಶ್ರೀಕಾಂತರೆಡ್ಡಿ ಮಾತನಾಡಿ, ಇಡೀ ದೇಶವೇ ಮೇ 31ರವರೆಗೆ ಲಾಕ್‌ಡೌನ್ ಪಾಲಿಸುತ್ತಿರುವಾಗ ನಾಯ್ಡು ಈ ರೀತಿ ನಡೆದುಕೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಹೈದರಾಬಾದಿನಲ್ಲಿ ಚಂದ್ರಬಾಬು ನಾಯ್ಡು ಜಾಥಾ ನಡೆಸಿದರು. ಆದರೆ ಯಾವುದೇ ಮಾಸ್ಕ್ ಅಥವಾ ಬಟ್ಟೆಯನ್ನು ಮುಖಕ್ಕೆ ಕಟ್ಟಿಕೊಂಡಿರಲಿಲ್ಲ. ಹಿರಿಯ ರಾಜಕೀಯ ಮುಖಡರಾಗಿ ಈ ರೀತಿ ನಡೆದುಕೊಂಡಿದ್ದು ಸರಿಯೇ, ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ರೆಡ್‌ಝೋನ್‌ನಿಂದ ಬಂದಿರುವ ಕಾರಣ ಅವರನ್ನು ಕ್ವಾರಂಟೈನ್‌ಗೆ ಕಳುಹಿಸಲೇಬೇಕು. ಮಾಜಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿ ಝಡ್ ಪ್ಲಸ್ ಸೆಕ್ಯುರಿಟಿ ನೀಡಲಾಗುತ್ತಿದೆ. 2003 ರಲ್ಲಿ ಅವರ ಮೇಲೆ ದಾಳಿ ನಡೆದಿತ್ತು.

Leave A Reply

Your email address will not be published.