Ultimate magazine theme for WordPress.

ಕ್ವಾರಂಟೈನ್: ಹೋಟೆಲ್ ಬಾತ್‌ರೂಮ್ ಸೀಲಿಂಗ್ ಕುಸಿತ, ಮಹಿಳೆ ಪಾರು

0

ಬೆಂಗಳೂರು, ಮೇ 21: ಕೊರೊನಾ ಹಾವಳಿಯಿಂದ ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬಂದವರು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಅದರಲ್ಲೂ ಹೊರ ದೇಶಗಳಿಂದ ಬಂದವರು ಕ್ವಾರಂಟೈನ್ ತಪ್ಪಿಸಿಕೊಳ್ಳುವ ಹಾಗಿಲ್ಲ.

ಹೀಗೆ ಹೊರದೇಶದಿಂದ ಬಂದು ಬೆಂಗಳೂರಿನ ಮೆಜೆಸ್ಟಿಕ್ ಬಳಿ ಕ್ವಾರಂಟೈನ್‌ ನಲ್ಲಿ ಉಳಿದುಕೊಂಡಿರುವ ಕುಟುಂಬವೊಂದು ಹೋಟೆಲ್ ನಲ್ಲಿ ಸಂಭವಿಸಿದ ಅವಘಡದಿಂದ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಹೌದು, ಹೊರದೇಶದಿಂದ ಬಂದು ಮೆಜೆಸ್ಟಿಕ ಬಳಿ ಹೋಟೆಲ್ ಒಂದರಲ್ಲಿ ಹಣ ಪಾವತಿಸಿ ಮೀನಾಕ್ಷಿ ವೆಂಕಟರಮಣ ಎನ್ನುವರ ಕುಟುಂಬ ತಂಗಿದೆ. ಬುಧವಾರ ಮೀನಾಕ್ಷಿ ಅವರು ಸ್ನಾನ ಮಾಡುವಾಗ ಹೋಟೆಲ್‌ನ ಬಾತ್‌ರೂಮ್‌ನ ಸೀಲಿಂಗ್ ಕುಸಿದು ಬಿದ್ದಿದೆ. ಘಟನೆ ನಡೆದಾಗ ಮೀನಾಕ್ಷಿ ಸ್ವಲ್ಪದರಲ್ಲೇ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸೀಲಿಂಗ್ ಅವಸ್ಥೆ ಬಗ್ಗೆ ಮೀನಾಕ್ಷಿ ಅವರು ಹೋಟೆಲ್ ಸಿಬ್ಬಂದಿ ಗಮನಕ್ಕೆ ತಂದಿದ್ದರೂ ಹೋಟೆಲ್‌ನವರು ನಿರ್ಲಕ್ಷ್ಯವಹಿಸಿದ್ದರು ಎಂದು ಮೀನಾಕ್ಷಿ ಆರೋಪಿಸಿದ್ದಾರೆ.

ಈ ಬಗ್ಗೆ ಮಾಹಿತಿಯನ್ನು ಮೀನಾಕ್ಷಿ ಅವರ ಮಗ ಟ್ವಿಟ್ಟರ್‌ಗೆ ಹಾಕಿ ಕ್ಟಾರಂಟೈನ್ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. “ನಾವು ಇಲ್ಲಿಗೆ ಏಳು ದಿನಗಳು ಬಂದಿದ್ದೇವೆ. ಆದರೆ, ನಮ್ಮ ಸ್ವ್ಯಾಬ್ ಪರೀಕ್ಷೆಯನ್ನು ಯಾವಾಗ ಮಾಡಲಾಗುತ್ತದೆ ಎಂದು ನಮಗೆ ತಿಳಿದಿಲ್ಲ. ನಾವು ವಿಚಾರಿಸಿದಾಗ, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪರೀಕ್ಷಿಸಲು ಅಧಿಕಾರಿಗಳಿಗೆ ಮಾತ್ರ ಆದೇಶವಿದೆ ಎಂದು ನಮಗೆ ತಿಳಿಸಿದ್ದಾರೆ. ಆದರೆ, ನಮ್ಮನ್ನು ಇಂತಹ ಕೆಟ್ಟ ಹೋಟೆಲ್‌ನಲ್ಲಿ ಉಳಿಯಲು ಬಿಟ್ಟು ಹೋಟೆಲ್ ಬಿಲ್ ಕಟ್ಟಿಸುತ್ತಿದ್ದಾರೆ” ಎಂದು ಮೀನಾಕ್ಷಿ ಅವರು ದೂರಿರುವುದಾಗಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

Leave A Reply

Your email address will not be published.