Ultimate magazine theme for WordPress.

ಕ್ವಾರಂಟೈನ್ ಅವಧಿ ಮುಗಿದವರನ್ನು ಬಿಡುಗಡೆ ಮಾಡಿ; ದೆಹಲಿ ಹೈಕೋರ್ಟ್‌‌ಗೆ ತಬ್ಲಿಘಿ ಜಮಾತ್‌ ಅರ್ಜಿ

0

ನವ ದೆಹಲಿ (ಮೇ 14); ಕ್ವಾರಂಟೈನ್‌ ಅವಧಿ ಮುಗಿದವರನ್ನು ಬಿಡುಗಡೆ ಮಾಡಿ ಎಂದು ತಬ್ಲಿಘಿ ಜಮಾತ್‌ ಸದಸ್ಯರು ಇಂದು ದೆಹಲಿ ಹೈಕೊರ್ಟ್‌‌ಗೆ ಅರ್ಜಿ ಸಲ್ಲಿಸಿದ್ದಾರೆ.

ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸುವ ಮುನ್ನವೇ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲಿಘಿ ಜಮಾತ್‌ನ ಧರ್ಮ ಪ್ರಚಾರ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ದೇಶ-ವಿದೇಶದ ನೂರಾರು ಜನ ಮುಸ್ಲಿಂ ಸಮುದಾಯದವರು ಪಾಲ್ಗೊಂಡಿದ್ದರು.

ಆದರೆ, ಈ ಪೈಕಿ ಕೆಲವರು ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಡುತ್ತಿದ್ದಂತೆ ಈ ಪ್ರಕರಣ ದೇಶದಾದ್ಯಂತ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಯಿತು. ಪರಿಣಾಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡವರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಮುಂದಾಯಿತು.

Leave A Reply

Your email address will not be published.