ಬೆಂಗಳೂರು: ಭಾರತದ ಕ್ರಿಕೆಟ್ ದಂತಕತೆ, ‘ಕ್ರಿಕೆಟ್ ದೇವರು’ ಎಂದು ಕರೆಯಲ್ಪಡುತ್ತಿದ್ದ ಭಾರತದ ಹೆಮ್ಮೆ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಲ್ಲಿಸಿ ನವೆಂಬರ್ 16ಕ್ಕೆ 31 ವರ್ಷಗಳು ತುಂಬುತ್ತದೆ. ನವೆಂಬರ್ 16 ವೃತ್ತಿಪರ ಕ್ರಿಕೆಟ್ನಿಂದ ಸಚಿನ್ ದೂರ ಸರಿದ ದಿನವಾಗಿದೆ.
ಮಾಸ್ಟರ್ ಬ್ಲಾಸ್ಟರ್ ಎಂದು ಖ್ಯಾತರಾಗಿದ್ದ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು ನವೆಂಬರ್ 1989ರಲ್ಲಿ ಪಾಕಿಸ್ತಾನದ ವಿರುದ್ಧ. ಕರಾಚಿಯಲ್ಲಿ ನಡೆದಿದ್ದ ಪಾಕಿಸ್ತಾನ-ಭಾರತ ಮೊದಲನೇ ಟೆಸ್ಟ್ನಲ್ಲಿ ಸಚಿನ್ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಪಾದಾರ್ಪಣೆ ವೇಳೆ 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಸಚಿನ್, ಮೊದಲ ಇನ್ನಿಂಗ್ಸ್ನಲ್ಲಿ 15 ರನ್ ಬಾರಿಸಿದ್ದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಅವಕಾಶ ಲಭಿಸಿರಲಿಲ್ಲ. ಈ ಪಂದ್ಯದಲ್ಲಿ ಪಾಕಿಸ್ತಾನ 409+305 ರನ್ ಗಳಿಸಿದ್ದರೆ, ಭಾರತ 262+303 ರನ್ ಬಾರಿಸಿ ಪಂದ್ಯ ಡ್ರಾ ಮಾಡಿಕೊಂಡಿತ್ತು.