Ultimate magazine theme for WordPress.

ಕೊರೊನಾ ಭಯ: ಡೊನಾಲ್ಡ್‌ ಟ್ರಂಪ್ ಈ ಮಾತ್ರೆಯನ್ನು ಪ್ರತಿ ದಿನ ಸೇವಿಸ್ತಿದ್ರು

0

ವಾಷಿಂಗ್ಟನ್, ಮೇ 19: ಕೊರೊನಾ ವೈರಸ್ ಆತಂಕದಿಂದಾಗಿ ವಾರಗಳ ಕಾಲ ಡೊನಾಲ್ಡ್ ಟ್ರಂಪ್ ಈ ಮಾತ್ರೆಗಳನ್ನು ಸೇವಿಸಿದ್ದೆ ಎಂದು ಬಾಯ್ಬಿಟ್ಟಿದ್ದಾರೆ. ಕೊವಿಡ್-19 ವಿರುದ್ಧ ಮಲೆರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ಯಾವುದೇ ಕೆಲಸ ಮಾಡುವುದಿಲ್ಲ ಎಂದು ತನ್ನದೇ ಸರ್ಕಾರದ ಪರಿಣಿತರು ಹೇಳಿದ್ದರು ಕೂಡ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಝಿಂಕ್‌ನೊಂದಿಗೆ ನಾನು ಪ್ರತಿದಿನ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರ ಸೇವಿಸುತ್ತಿದ್ದೆ ಎಂದಿದ್ದಾರೆ. ಏಕೆ ಎಂದು ಪ್ರಶ್ನಿಸಿದಾಗ , ಅದು ಒಳ್ಳೆಯದು ಎನಿಸಿತು . ಅಲ್ಲದೇ ಅದರ ಬಗ್ಗೆ ಸಾಕಷ್ಟು ಒಳ್ಳೆಯ ವಿಚಾರಗಳನ್ನು ಕೇಳಿದ್ದೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯ ಬಳಕೆಗೆ ಉತ್ತೇಜನ ನೀಡಲು ಟ್ರಂಪ್ ಆಸಕ್ತಿ ಹೊಂದಿದ್ದರೆ, ಕೆಲ ವೈದ್ಯರು ಕೊರೊನಾ ರೋಗಿಗಳಿಗೆ ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.

ಹೈಡ್ರಾಕ್ಸಿಕ್ಲೊರೊಕ್ವಿನ್ ನೀಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಅದಾದ ಬಳಿಕ ಮೋದಿ ಮಾತ್ರೆಗಳ ರಫ್ತಿಗೆ ಒಪ್ಪಿಕೊಂಡಾಗ ಮೋದಿ ನನ್ನ ಒಳ್ಳೆಯ ಸ್ನೇಹಿತ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಮೆರಿಕದಲ್ಲಿ ಕೊರೊನಾ ವೈರಸ್‌ಗೆ ಈಗಾಗಲೇ 90 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Leave A Reply

Your email address will not be published.