Ultimate magazine theme for WordPress.

ಕೊರೊನಾವೈರಸ್: ಅಮೆರಿಕದಲ್ಲಿ ಲಕ್ಷದ ಗಡಿ ದಾಟಿದ ಸಾವಿನ ಸಂಖ್ಯೆ

0

ವಾಷಿಂಗ್ಟನ್, ಮೇ 28: ಅಮೆರಿಕದಲ್ಲಿ ಕೊರೊನಾವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಲಕ್ಷದ ಗಡಿ ದಾಟಿದೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ. ವಿಶ್ವದಲ್ಲೇ ಕೊರೊನಾವೈರಸ್‌ನಿಂದ ಮೃತಪಟ್ಟವರ ಸಂಖ್ಯೆ ಅಮೆರಿಕದಲ್ಲೇ ಹೆಚ್ಚಿದೆ. 100,047 ಮಂದಿ ಮೃತಪಟ್ಟಿದ್ದು, 16 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ.

ಒಂದೊಮ್ಮೆ ಎರಡನೇ ಬಾರಿಗೆ ಕೊರೊನಾ ಸೋಂಕು ಅಮೆರಿಕದವನ್ನು ಆಕ್ರಮಿಸಿದರೂ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಂದರ್ಶನವೊಂದರಲ್ಲಿ ಟ್ರಂಪ್ ಮೊಂಡುತನವನ್ನು ತೋರಿಸಿದ್ದರು. ಅಮೆರಿಕದಲ್ಲಿ 50 ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ನ್ಯೂಯಾರ್ಕ್‌ನಲ್ಲಿ ಸಲೋನ್‌ಗಳು, ರೆಸ್ಟೋರೆಂಟ್‌ಗಳು ಮುಚ್ಚಿವೆ.ದೇಶದಲ್ಲಿ ಸಾವಿನ ಸಂಖ್ಯೆ 1 ಲಕ್ಷ ಗಡಿ ದಾಟಿರುವುದರ ಬಗ್ಗೆ ಟ್ರಂಪ್ ಮೌನವಹಿಸಿದ್ದಾರೆ.

Leave A Reply

Your email address will not be published.