Ultimate magazine theme for WordPress.

ಕೊರೊನಾದಿಂದ ಜನರ ಕಾಪಾಡಲು ಸೆಲಿಬ್ರಿಟಿಯೊಬ್ಬ ಮಾಡಿದ ಮೋಡಿ!

0

ಸೆನೆಗಲ್, ಮೇ 23: ಜಗತ್ತಿನಾದ್ಯಂತ ಕೊರೊನಾ ಹಾವಳಿ ಜೋರಾಗಿದೆ. ಯಾವುದೇ ದೇಶಗಳು ಇದರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಪಶ್ಚಿಮ ಆಫ್ರಿಕಾದ ಪುಟ್ಟ ರಾಷ್ಟ್ರ ಸೆನೆಗಲ್ ಕೂಡ ಕೊರೊನಾ ಹಾವಳಿಗೆ ತುತ್ತಾಗಿದೆ. ಮುಸ್ಲಿಂ ಬಾಹುಳ್ಯದ ಬಡ ರಾಷ್ಟ್ರವಾಗಿರುವ ಈ ದೇಶದಲ್ಲಿಗ ರಂಜಾನ್ ಹಬ್ಬ ಆಚರಣೆಯಲ್ಲಿದೆ.

ಹೀಗಾಗಿ ಜನರನ್ನು ಕೊರೊನಾದಿಂದ ದೂರ ಇಡಲು ಅಲ್ಲಿನ ಸರ್ಕಾರ ಹೆಣಗಾಡುತ್ತಿದೆ. ಇದಕ್ಕೆ ಖಾಸಗಿ ಸುದ್ದಿವಾಹಿನಿಯಯಲ್ಲಿ ಸೆನೆಗಲ್‌ನ ಖ್ಯಾತ ಟಿವಿ ಸೆಲೆಬ್ರೆಟಿಯಾದ Alioune Thiam ಎಂಬುವರು, ಸೆನೆಗಲ್‌ನ ಪ್ರಖ್ಯಾತ ವೈದ್ಯರಾಗಿದ್ದ ಹಾಗೂ ಜನರಿಗೆ ಬಹು ಇಷ್ಟವಾಗಿದ್ದ Doctor Diouf ಎಂಬುವರ ವೇಷ ಧರಿಸಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

ಸೆನೆಗಲ್‌ನ ಖ್ಯಾತ ಟಿವಿ ಸೆಲೆಬ್ರೆಟಿಯಾದ Alioune Thiam ಕೊರೊನಾ ಹರಡುವುದನ್ನು ತಡೆಗಟ್ಟಲು ITV ಎಂಬ ಖಾಸಗಿ ಟಿವಿ ಚಾನೆಲ್‌ನಲ್ಲಿ Doctor Diouf ವೇಷ ತೊಟ್ಟಿದ್ದಾರೆ. ಇವರು ಪ್ರತಿದಿನ ಸಂಜೆ ಕೊರೊನಾದಿಂದ ದೂರ ಇರುವುದು ಹೇಗೆ ಎಂಬುದರ ಬಗ್ಗೆ ತಮ್ಮದೇಯಾದ ಹಾಸ್ಯ ಮಿಶ್ರಿತ ಶೈಲಿಯಲ್ಲಿ 10 ನಿಮಿಷದ ಕಾರ್ಯಕ್ರಮದಲ್ಲಿ ಜನರಿಗೆ ಮಾಹಿತಿ ನೀಡುತ್ತಾರೆ. ಈ ಕಾರ್ಯಕ್ರಮ ಅಲ್ಲಿ ಭಾರೀ ಯಶಸ್ಸು ಕಂಡಿದೆ ಎಂದು ಅಲ್‌ ಜಜೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

Leave A Reply

Your email address will not be published.