ನವದೆಹಲಿ, ಫೆಬ್ರವರಿ 20: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೀತಿ ಆಯೋಗದ ಆಡಳಿತ ಮಂಡಳಿಯ ಆರನೇ ಸಭೆಯನ್ನು ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ, ಭಾರತದಲ್ಲಿ ಉದ್ಯಮ ನಡೆಸಲು ಸುಲಭವಾಗುವಂತೆ ಪುರಾತನ ಕಾನೂನುಗಳನ್ನು ರದ್ದುಗೊಳಿಸುವ ಮಾತನಾಡಿದರು. ಜತೆಗೆ ಆರ್ಥಿಕ ಪ್ರಗತಿಯನ್ನು ವೃದ್ಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಗೂಡಿ ಕೆಲಸ ಮಾಡಬೇಕೆಂದು ಪ್ರತಿನಿಧಿಸಿದರು.
ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಕಾರ್ಯಕ್ರಮದ ಭಾಗವಾಗಲು ಖಾಸಗಿ ವಲಯಕ್ಕೆ ಸಂಪೂರ್ಣ ಅವಕಾಶ ನೀಡಬೇಕು. ದೇಶದ ಪ್ರಗತಿಗೆ ಕೇಂದ್ರ ಹಾಗೂ ರಾಜ್ಯಗಳು ಜತೆಗೂಡಿ ಕೆಲಸ ಮಾಡಬೇಕು. ಜತೆಗೆ ನಿರ್ದಿಷ್ಟ ದಿಕ್ಕಿನಲ್ಲಿ ಸಾಗಬೇಕು ಹಾಗೂ ಸಹಕಾರಯುತ ಸಂಯುಕ್ತಕೂಟವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಬೇಕು. ಇದು ಮಾತ್ರವಲ್ಲದೆ, ನಾವು ಸ್ಪರ್ಧಾತ್ಮಕತೆ ಹಾಗೂ ಸಂಯುಕ್ತ ಸಹಕಾರವನ್ನು ರಾಜ್ಯಗಳ ನಡುವೆ ಮಾತ್ರವಲ್ಲ ಜಿಲ್ಲೆಗಳಲ್ಲಿಯೂ ತರಬೇಕಿದೆ. ಆರ್ಥಿಕ ಬೆಳವಣಿಗೆಗೆ ಖಾಸಗಿ ವಲಯದ ಪ್ರತಿನಿಧಿತ್ವವನ್ನು ಹಾಗೂ ಗೌರವವನ್ನು ಸರ್ಕಾರ ನೀಡಬೇಕಿದೆ ಎಂದು ಹೇಳಿದರು. ಮುಂದೆ ಓದಿ.
ಜಗತ್ತಿಗೆ ಮುಂದೆ ಭಾರತ ಪ್ರಜ್ವಲ
‘ಕೋವಿಡ್ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಜತೆಗೆ ಕೆಲಸ ಮಾಡಿವೆ ಎಂಬುದನ್ನು ನೋಡಿದ್ದೇವೆ. ಇದರಲ್ಲಿ ದೇಶ ಯಶಸ್ವಿಯಾಗಿದ್ದು, ಇಡೀ ಜಗತ್ತಿನ ಮುಂದೆ ಭಾರತಕ್ಕೆ ಉತ್ತಮ ವರ್ಚಸ್ಸನ್ನು ಸೃಷ್ಟಿಸಿದೆ’ ಎಂದರು.