Ultimate magazine theme for WordPress.

ಕಾಸರಗೋಡು-ಮಂಗಳೂರು ನಡುವಿನ ದಿನದ ಸಂಚಾರಕ್ಕೆ ಪಾಸ್ ಕಡ್ಡಾಯ

0

ದಕ್ಷಿಣ ಕನ್ನಡ, ಜೂನ್ 03 : ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದ ಕಾಸರಗೋಡು ಮತ್ತು ಜಿಲ್ಲೆಯ ನಡುವೆ ಸಂಚಾರ ನಡೆಸುವ ಜನರಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪ್ರತಿದಿನ ಸಂಚಾರ ನಡೆಸುವ ಜನರು ವಿಶೇಷ ಪಾಸುಗಳನ್ನು ಪಡೆಯಬೇಕಾಗುತ್ತದೆ.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಈ ಕುರಿತು ಮಾಹಿತಿ ನೀಡಿದ್ದಾರೆ. “ಪ್ರತಿದಿನ ಸಂಚಾರ ನಡೆಸುವ ಉದ್ಯೋಗಿಗಳು/ವಿದ್ಯಾರ್ಥಿಗಳಿಗೆ ದಿನದ ಪಾಸ್‌ ವಿತರಣೆ ಮಾಡಲಾಗುತ್ತದೆ. ಈ ಪಾಸ್‌ಗಳ ಅವಧಿ ಜೂನ್ 30ರ ತನಕ ಇರುತ್ತದೆ” ಎಂದು ಹೇಳಿದ್ದಾರೆ.

ದಿನದ ವಿಶೇಷ ಪಾಸು ಪಡೆಯಲು ಅರ್ಜಿ ಸಲ್ಲಿಸುವಾಗ ಭೇಟಿ ನೀಡುವ ಪ್ರದೇಶವನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಉದ್ಯೋಗ ಮಾಡುವವರು ಕಚೇರಿಯ ವಿಳಾಸ ನಮೂದಿಸಬೇಕು. ದಕ್ಷಿಣ ಕನ್ನಡದಲ್ಲಿ ವಾಸವಿರುವ ವಿಳಾಸವನ್ನು ನೀಡಬೇಕಿದೆ.

ತಲಪ್ಪಾಡಿ ಚೆಕ್‌ ಪೋಸ್ಟ್‌ನಲ್ಲಿ ಪ್ರತಿದಿನ ಪಾಸು ಇರುವವರನ್ನು ಪರಿಶೀಲಿಸಿ ಒಳಗೆ ಬಿಡಲಾಗುತ್ತದೆ. ಒಂದು ವೇಳೆ ಪಾಸು ತೋರಿಸಲು ವಿಫಲವಾದರೆ ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

Leave A Reply

Your email address will not be published.