Ultimate magazine theme for WordPress.

ಕಾರವಾರ; ಕೊರೊನಾ ಗೆದ್ದು, ಮೂರ್ಛೆ ರೋಗದಿಂದಲೂ ಪಾರಾದ 5 ತಿಂಗಳ ಮಗು

0

ಕಾರವಾರ, ಮೇ 29: ಕೊರೊನಾ ವೈರಸ್ ನಿಂದಾಗಿ ದೇಶದ ವಿವಿಧೆಡೆ ಸಾವು- ನೋವುಗಳು ಸಂಭವಿಸಿವೆ. ರಾಜ್ಯದಲ್ಲೂ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಐದು ತಿಂಗಳ ಮಗು ಕೊರೊನಾ ಸೋಂಕಿನಿಂದ ಮುಕ್ತಿ ಪಡೆದಿರುವುದಲ್ಲದೇ ಮೂರ್ಛೆ ರೋಗದಿಂದಲೂ ಹೊರಬಂದಿದೆ.

ಐದು ತಿಂಗಳ ಮಗು ಅತಿ ಮಾರಕ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಗೆದ್ದು ಬಂದಿದೆ. ಇದರೊಂದಿಗೆ, ಮಗುವಿಗಿದ್ದ ಮೂರ್ಛೆ ರೋಗವನ್ನೂ ಗುಣಪಡಿಸುವಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿದ್ದು, ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಜಿಲ್ಲೆಯ ಮಟ್ಟಿಗೆ, ವೈದ್ಯಲೋಕದ ಪಾಲಿಗೆ ಇದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಇದೀಗ ಕೊರೊನಾ ವೈರಸ್ ನಿಂದ ಗುಣಮುಖರಾದ ರಾಜ್ಯದ ಅತಿ ಕಿರಿಯರ ಸಾಲಿನಲ್ಲಿ ಈ ಐದು ತಿಂಗಳ ಮಗು ಸೇರ್ಪಡೆಯಾಗಿದೆ. ಇದು ಕೊರೊನಾ ವಿರುದ್ಧ ಹೋರಾಡುತ್ತಿರುವ ಇತರೆ ರೋಗಿಗಳು ಹಾಗೂ ಆರೋಗ್ಯ ಸಿಬ್ಬಂದಿಗೆ ಹೊಸ ಹುರುಪು ಹಾಗೂ ನಿರೀಕ್ಷೆಯನ್ನು ತುಂಬಿದೆ.

Leave A Reply

Your email address will not be published.