ಬೆಂಗಳೂರು(ಮೇ.12): ಕರ್ನಾಟಕದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರಿದಿದೆ. ಇಂದು ರಾಜ್ಯದಲ್ಲಿ ಹೊಸ 42 ಕೋವಿಡ್-19 ಕೇಸುಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಸೋಮವಾರದಿಂದ(ನಿನ್ನೆ) ಇಂದಿನ ಮಧ್ಯಾಹ್ನ 12 ಗಂಟೆಯವರೆಗೂ ಸರ್ಕಾರದ ಪ್ರಕಾರ ಬೆಂಗಳೂರು 3, ಹಾಸನ 5, ಬಾಗಲಕೋಟೆ 15, ಬಳ್ಳಾರಿ 1, ಚಿಕ್ಕಬಳ್ಳಾಪುರ 1, ಕಲ್ಬುರ್ಗಿ 1, ಯಾದಗಿರಿ 2, ಬೀದರ್ 2, ಮಂಡ್ಯ1, ದಕ್ಷಿಣ ಕನ್ನಡ 2, ಧಾರವಾಡದಲ್ಲಿ 9 ಕೇಸ್ ದಾಖಲಾಗಿವೆ.
ಇನ್ನು, ಇದುವರೆಗೂ 31 ಮಂದಿ ಈ ಮಾರಕ ಕೊರೋನಾಗೆ ಬಲಿಯಾಗಿದ್ದಾರೆ. ಜತೆಗೆ 904 ಸೋಂಕಿತರ ಪೈಕಿ 426 ಮಂದಿ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ಧಾರೆ ಎಂದು ತಿಳಿದು ಬಂದಿದೆ.