ಬೆಂಗಳೂರು, ಜೂನ್ 4: ದೇಶಾದ್ಯಂತ ಕರೊನಾ ವೈರಸ್ ದಾಳಿ ಇಟ್ಟ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೂಡ ಮೃಗಾಲಯಗಳನ್ನು ಮುಚ್ಚಲಾಗಿತ್ತು.
ಜೂನ್ 8 ರಿಂದ ಮೃಗಾಲಯಗಳು ಪುನರಾರಂಭಗೊಳ್ಳಲಿವೆ. ಜೂನ್.8ರಿಂದ ಮೃಗಾಲಯಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿಯೇ ಯಾವುದಕ್ಕೆ ಅನುಮತಿ ನೀಡಲಾಗಿದೆ, ಯಾವುದಕ್ಕೆ ಇಲ್ಲ ಎಂಬುದನ್ನು ತಿಳಿಸಲಾಗುತ್ತದೆ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಮೃಗಾಲಯಗಳನ್ನು ತೆರೆಯಲು ಸರ್ಕಾರ ಹಾಗೂ ಕರ್ನಾಟಕದ ಮೃಗಾಲಯ ಪ್ರಾಧಿಕಾರ ಚಿಂತನೆ ನಡೆಸುತ್ತಿದ್ದು, ಈ ಕುರಿತು ಶೀಘ್ರದಲ್ಲಿಯೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿವೆ.
ಈ ಮೊದಲೇ ಪುನರಾರಂಭಿಸುವುದಾಗಿ ಮೈಸೂರು ಮೃಗಾಲಯ ತಿಳಿಸಿದ್ದು, ನಿಯಂತ್ರಿತ ಜನರಿಗಷ್ಟೇ ಮೃಗಾಲಯ ಪ್ರವೇಶಕ್ಕೆ ಅನುಮತಿ ನೀಡಲಿದ್ದು, ಭೇಟಿಗೆ ಬರುವ ಜನರ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸಲಾಗುತ್ತದೆ ಎಂದು ಹೇಳಲಾಗಿತ್ತು.