ಲಕ್ನೋ, ಜೂನ್ 5: ಆಡಳಿತ ಮಂಡಳಿ ಕಣ್ಣಿಗೆ ಮಣ್ಣೆರಚಿ 25 ಶಾಲೆಗಳಿಂದ ಸುಮಾರು 1 ಕೋಟಿ ರೂ ವೇತನವನ್ನು ಶಿಕ್ಷಕಿ ಪಡೆದಿದ್ದಾರೆ. ಅನಾಮಿಕ ಶುಕ್ಲ, ಉತ್ತರ ಪ್ರದೇಶದ ಶಿಕ್ಷಕಿಯಾಗಿದ್ದು, ಒಟ್ಟು 25 ಶಾಲೆಗಳ ಶಿಕ್ಷಕರುಗಳ ಹೆಸರಿನ ಪಟ್ಟಿಯಲ್ಲಿ ಇವರ ಹೆಸರೂ ಇದೆ. ಆದರೆ ಯಾರಿಗೂ ತಿಳಿದಿರಲಿಲ್ಲ.
ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಪೂರ್ಣ ಅವಧಿಯ ವಿಜ್ಞಾನ ಶಿಕ್ಷಕಿಯಾಗಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಾಗೆಯೇ ಅವರು ಅಂಬೇಡ್ಕರ್ ನಗರ, ಬಾಘ್ಪಟ್, ಅಲಿಗಢ, ಸಹರಾನ್ಪುರ, ಪ್ರಯಾಗ್ರಾಜ್ ಜಿಲ್ಲೆಗಳ ಶಾಲೆಗಳಲ್ಲಿಯೂ ಪಾಠ ಮಾಡುತ್ತಿದ್ದರು. ಆದರೆ ಅದು ಹೇಗೆ ಎಂಬುದು ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ.
ಶಿಕ್ಷಣ ಅಧಿಕಾರಿ ಆನಂದ್ ಪ್ರಕಾಶ್ ಮಾತನಾಡಿ, ಸರ್ವ ಶಿಕ್ಷಣ ಅಭಿಯಾನ ಕಚೇರಿಯು ಆರು ಜಿಲ್ಲೆಗಳಿಗೆ ನೋಟಿಸ್ ಕಳುಹಿಸಿದೆ. ಅಲ್ಲಿ ಯಾವ ಶಾಲೆಯಲ್ಲಾದರೂ ಅನಾಮಿಕ ಶುಕ್ಲ ಎಂಬ ಶಿಕ್ಷಕಿ ಕೆಲಸ ಮಾಡುತ್ತಿದ್ದಾರೆಯೇ ಎಂದು ವಿಚಾರಿಸಲಾಗಿದೆ. ಲಾಕ್ಡೌನ್ ಇರುವ ಕಾರಣ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ರಾಯ್ ಬರೇಲಿಯು ಲಿಸ್ಟ್ನಲ್ಲಿ ಇರಲಿಲ್ಲ. ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಎಲ್ಲಾ ಕೆಜಿವಿಬಿಗೂ ನೋಟಿಸ್ ನೀಡಲಾಗಿದೆ .