ಮಂಡ್ಯ, ಮೇ 19: ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಅಬ್ಬರಿಸುವಂತೆ ಕಾಣುತ್ತಿದೆ. ಮಂಗಳವಾರ ಒಂದೇ ದಿನ ಇಲ್ಲಿ ಬರೋಬ್ಬರಿ 62 ಪ್ರಕರಣಗಳು ದೃಢಪಟ್ಟಿರುವ ಸಂಗತಿ ಜಿಲ್ಲೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಜಿಲ್ಲೆಯಲ್ಲಿ ಇದೀಗ ಸೋಂಕಿತರ ಸಂಖ್ಯೆ ಒಟ್ಟು 151ಕ್ಕೆ ಏರಿದೆ. ಇಂದು ದೃಢಪಟ್ಟ ಪ್ರಕರಣಗಳಲ್ಲಿ, ಎಲ್ಲರೂ ಕ್ವಾರಂಟೈನ್ ನಲ್ಲಿದ್ದು, ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದವರಾಗಿದ್ದಾರೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಕಂಡ ರಾಜ್ಯದ ಮೊದಲ ಜಿಲ್ಲೆ ಇದಾಗಿದೆ.
ಮಂಡ್ಯದ ಕೆ.ಆರ್.ಪೇಟೆಗೆ ಮುಂಬೈನಿಂದ ಬರುವವರ ಸಂಖ್ಯೆ ಹೆಚ್ಚಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಈ ವಲಸಿಗರಲ್ಲಿಯೇ ಸೋಂಕು ದೃಢಪಡುತ್ತಿರುವುದು, ಜಿಲ್ಲೆಗೆ ಸೋಂಕು ವ್ಯಾಪಿಸುವ ಆತಂಕ ಹುಟ್ಟಿಕೊಂಡಿದೆ. ಎರಡು ದಿನಗಳ ಹಿಂದಷ್ಟೇ ಒಂದೇ ದಿನ 22 ಸೋಂಕುಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 72ಕ್ಕೆ ಏರಿತ್ತು. ಮುಂಬೈನ ನಂಟಿನಿಂದಲೇ ಮಂಡ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿತ್ತು. ಇಂದು ಮತ್ತೆ 62 ಪ್ರಕರಣಗಳು ಕಂಡುಬಂದಿರುವುದು ಭೀತಿ ಆವರಿಸುವಂತೆ ಮಾಡಿದೆ.