Ultimate magazine theme for WordPress.

ಐಸಿಸಿ ಎಲೈಟ್‌ ಪ್ಯಾನಲ್‌ನಲ್ಲಿ ಶ್ರೀನಾಥ್‌, ರವಿ ಮುಂದುವರಿಕೆ

0

ದುಬೈ: ಮೈಸೂರು ಎಕ್ಸ್‌ಪ್ರೆಸ್‌ ಖ್ಯಾತಿಯ ಕರ್ನಾಟಕದ ಮಾಜಿ ವೇಗದ ಬೌಲರ್‌ ಜಾವಗಲ್‌ ಶ್ರೀನಾಥ್‌, ಐಸಿಸಿಯ ಎಲೈಟ್‌ ಪ್ಯಾನೆಲ್‌ನಲ್ಲಿ ಭಾರತದ ಏಕೈಕ ಮ್ಯಾಚ್‌ ರೆಫರಿಯಾಗಿ ಮುಂದುವರಿದಿದ್ದಾರೆ.

ಇದೇ ವೇಳೆ ಅಂಪೈರ್‌ಗಳ ಸಾಲಿನಲ್ಲಿ ಎಸ್‌.ರವಿ ಅವರನ್ನು ಎಲೈಟ್‌ ಪ್ಯಾನಲ್‌ನಲ್ಲಿ ಐಸಿಸಿ ಮುಂದುವರಿಸಿದೆ. ಈ ಅವಧಿ ಜು.1ರಿಂದ 2019ರ ಜೂ.30ರವರೆಗೆ ಇರಲಿದೆ. ಶ್ರೀನಾಥ್‌ ಅವರೊಂದಿಗೆ ಡೇವಿಡ್‌ ಬೂನ್‌, ಕ್ರಿಸ್‌ ಬ್ರಾಡ್‌, ಜೆಫ್‌ ಕ್ರೋವ್‌, ರಂಜನ್‌ ಮದುಗಲೆ, ಆ್ಯಂಡಿ ಪೈಕ್ರಾಫ್ಟ್‌ ಮತ್ತು ರಿಚೀ ರಿಚಡ್ರ್ಸನ್‌ ಎಲೈಟ್‌ ಪ್ಯಾನಲ್‌ ಮ್ಯಾಚ್‌ ರೆಫರಿಗಳಾಗಿ ಮುಂದುವರಿದಿದ್ದಾರೆ.

ಎಲೈಟ್‌ ಪ್ಯಾನಲ್‌ ಅಂಪೈರ್‌ಗಳ ಪಟ್ಟಿಯಲ್ಲಿ ಎಸ್‌.ರವಿ ಅವರೊಂದಿಗೆ ಅಲೀಮ್‌ ದರ್‌, ಕುಮಾರ್‌ ಧರ್ಮಸೇನಾ, ಮರಾಯಸ್‌ ಎರಾಸ್ಮಸ್‌,… ಕ್ರಿಸ್‌ ಗ್ಯಾಫಾನಿ, ಇಯಾನ್‌ ಗೌಲ್ಡ್‌, ರಿಚರ್ಡ್‌ ಇಲಿಂಗ್ವರ್ತ್‌, ರಿಚರ್ಡ್‌ ಕೆಟಲ್‌ಬೋರೊ, ನೈಜಲ್‌ ಲಾಂಗ್‌, ಬ್ರುಸ್‌ ಆಕ್ರೆಸ್‌ಫೋರ್ಡ್‌, ಪಾಲ್‌ ರೈಫಲ್‌ ಮತ್ತು ರಾಡ್‌ ಟಕರ್‌ ಅವರನ್ನು ಮುಂದುವರಿಸಲಾಗಿದೆ.

Leave A Reply

Your email address will not be published.