Ultimate magazine theme for WordPress.

ಐಪಿಎಲ್ ಈ ವರ್ಷವೇ ನಡೆಯುವ ಬಗ್ಗೆ ಆಸಿಸ್ ಕ್ರಿಕೆಟಿಗ ಭರವಸೆ

0

ಕೊರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ ಬಗೆಗಿನ ಗೊಂದಲ ಇನ್ನೂ ಮುಂದುವರಿದಿದೆ. ಆಂತರಿಕವಾಗಿ ಐಪಿಎಲ್ ನಡೆಯುವ ಬಗ್ಗೆ ಸಾಕಷ್ಟು ಬೆಳವಣಿಗೆಗಳು ನಡಯುತ್ತಿವೆ ಎಂಬುದು ಮೂಲಗಳು ತಿಳಿಸುತ್ತಿದ್ದರೂ ಯಾವುದೂ ಅಧಿಕೃತವಾಗಿಲ್ಲ. ಈ ಮಧ್ಯೆ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಐಪಿಎಲ್ ಈ ವರ್ಷ ನಡೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಡಿಸಿದ್ದಾರೆ. ಸದ್ಯ ನಿಂತಿರುವ ಕ್ರಿಕೆಟ್‌ ಮತ್ತೆ ಆರಂಭವಾಗಲು ಐಪಿಎಲ್ ಹೆಬ್ಬಾಗಿಲಾಗಲಿದೆ ಎಂದು ಹೇಳಿರುವ ಪ್ಯಾಟ್ ಕಮ್ಮಿನ್ಸ್, ಈ ಮೆಗಾ ಟೂರ್ನಿ ಟಿ20 ವಿಶ್ವಕಪ್‌ನ ಸಿದ್ಧತೆಗೂ ಸಹಾಯಕವಾಗಲಿದೆ ಎಂದು ಪ್ಯಾಟ್ ಕಮ್ಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್‌ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದರು. ಕೊಲ್ಕತ್ತಾ ನೈಟ್‌ ರೈಡರ್ಸ್ ಐಪಿಎಲ್ ತಂಡ ಪ್ಯಾಟ್ ಕಮ್ಮಿನ್ಸ್ ಅವರನ್ನು 15.5 ಕೋಟಿ ನೀಡಿ ಖರೀದಿಸಿತ್ತು. ಕೊಲ್ಕತ್ತಾ ತಂಡದ ಮ್ಯಾನೇಜ್‌ಮೆಂಟ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಈ ವರ್ಷ ಐಪಿಎಲ್ ಆಡಲು ಕಾತುರನಾಗಿರುವುದಾಗಿ ಹೇಳಿಕೊಂಡಿದ್ದಾರೆ. ಬೇರೆ ಬೇರೆ ಕಾರಣಗಳಿಗಾಗಿ ನಾನು ಐಪಿಎಲ್‌ನಲ್ಲಿ ಆಡುವುದನ್ನು ಬಯಸುತ್ತೇನೆ ಎಂದು ಕಮ್ಮಿನ್ಸ್ ಹೇಳಿದ್ದಾರೆ. ಕ್ರಿಕೆಟ್ ಮರು ಆರಂಭಕ್ಕೆ ಐಪಿಎಕ್ ಸೂಕ್ತವಾದ ವೇದಿಕೆಯಾಗಿದೆ. ಟಿ20 ಟೂರ್ನಿಯಾಗಿರುವ ಕಾರಣ ದೈಹಿಕವಾಗಿಯೂ ಇದರಿಂದ ತೊಡಕಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.