Ultimate magazine theme for WordPress.

ಐಪಿಎಲ್‌ ಇತಿಹಾಸದ “ಚೂಸಿ” ಭಾರತೀಯ ಬೌಲರ್‌ಗಳು ಇವರು!

0

ಟಿ20 ಕ್ರಿಕೆಟ್ ಯಾವಾಗಲೂ ಬ್ಯಾಟ್ಸ್‌ಮನ್‌ಗಳ ಆಟ ಎಂಬ ಮಾತಿದೆ. ಬೌಲರ್‌ಗಳು ಇಲ್ಲಿ ದಂಡನೆಗೆ ಒಳಗಾಗಬೇಕಾಗುತ್ತದೆ ಎಂಬ ನಂಬಿಕೆಯೂ ಇದೆ. ಅದಕ್ಕೆ ಕಾರಣ ಈ ಆಟದಲ್ಲಿನ ನಿಯಮಗಳು. ಬೌಲರ್‌ಗಳಿಗಿಂತ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಹೆಚ್ಚು ಅನುಕೂಲಕರವಾಗಿದೆ ಎಂಬುದು ಕೂಡ ಒಪ್ಪಿಕೊಳ್ಳಬೇಕಾದ ಸತ್ಯ. ಹಾಗಿದ್ದರೂ ಇದು ಪ್ರತಿ ಪಂದ್ಯಗಳೂ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗದಂತಿಲ್ಲ ಎಂಬುದು ಕೂಡ ಅಷ್ಟೇ ನಿಜ. ಅದೆಷ್ಟೋ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗಿಂತಲೂ ಬೌಲರ್‌ಗಳೇ ಮಿಂಚಿದ್ದಾರೆ. ಮ್ಯಾಚ್‌ವಿನ್ನರ್‌ಗಳು ಎನಿಸಿದ್ದಾರೆ. ಅದರಲ್ಲೂ ಹೊಡಿಬಡಿ ಆಟಗಾರರನ್ನು ಸಂಪೂರ್ಣ ಕಟ್ಟಿ ಹಾಕಿದ ಸಾಕಷ್ಟು ದೃಷ್ಟಾಂತಗಳಿವೆ.

ಎಕಾನಮಿ ವಿಚಾರದಲ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮೂವರು ಭಾರತೀಯ ಬೌಲರ್‌ಗಳು ಇದ್ದಾರೆ. ಅದರಲ್ಲಿ ಒಬ್ಬರು ಟೀಮ್ ಇಂಡಿಯಾದ ಮಾಜಿ ಆಟಗಾರ ಪ್ರವೀಣ್ ಕುಮಾರ್. ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಿದ ಪ್ರವೀಣ್ ಕಿಂಗ್ಸ್‌ ಇಲವೆನ್ ಪಂಜಾಬ್ ತಂಡದ ಪರವಾಗಿ 2012ರಲ್ಲಿ ಅತ್ಯಂತ ಎಕಾನಮಿ ಬೌಲಿಂಗ್ ಮಾಡಿ ಗಮನಸೆಳೆದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳನ್ನು ಎಸೆತ ಪ್ರವೀಣ್ ಕುಮಾರ್ ಕೇವಲ 8 ರನ್ ಮಾತ್ರವೇ ನೀಡಿದ್ದರು. ಆದರೆ ಇದರಲ್ಲಿ ಒಂದೂ ವಿಕೆಟ್ ಪಡೆದಿರಲಿಲ್ಲ.

Leave A Reply

Your email address will not be published.