ನವದೆಹಲಿ, ಜೂ 1: ಏರ್ಟೆಲ್ ಇತ್ತೀಚೆಗೆ ಮನೆಯಿಂದ ಕೆಲಸ ಮಾಡುವವರಿಗಾಗಿ ವರ್ಕ್ ಫ್ರಮ್ ಹೋಮ್ ಯೋಜನೆಯನ್ನು ಪ್ರಾರಂಭಿಸಿತು. ಏರ್ಟೆಲ್ ನಂತರ ಕೆಲವು ದಿನಗಳ ನಂತರ ವೊಡಾಫೋನ್ 251 ರುಪಾಯಿಗಳ ಯೋಜನೆಯನ್ನು ಪರಿಚಯಿಸಿದೆ. ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಸಹ ಏರ್ಟೆಲ್ನಂತೆಯೇ 251 ರುಪಾಯಿಗಳ ಯೋಜನೆಯನ್ನು ಪ್ರಾರಂಭಿಸಿತ್ತು. ಇದೀಗ ವಿಶೇಷವೆಂದರೆ ಮೂರು ಕಂಪನಿಗಳ 251 ರುಪಾಯಿಗಳ ಯೋಜನೆಯಲ್ಲಿ ನೀವು ಒಂದೇ ರೀತಿಯ ಲಾಭವನ್ನು ಪಡೆಯುತ್ತೀರಿ. ಹಾಗಿದ್ದರೆ ಮೂರು ಕಂಪನಿಗಳ ಈ ಯೋಜನೆ ಏನು ಎಂಬುದರ ಬಗ್ಗೆ ಈ ಕೆಳಗೆ ತಿಳಿದುಕೊಳ್ಳೋಣ.
ಬಿಜಿನೆಸ್ ಟುಡೆ ವರದಿಯ ಪ್ರಕಾರ, ವೊಡಾಫೋನ್ನ ಪ್ರಿಪೇಯ್ಡ್ ಯೋಜನೆ 251 ರುಪಾಯಿ. ಇದು ಏರ್ಟೆಲ್ ಮತ್ತು ಜಿಯೋನಂತಹ ಟಾಪ್-ಅಪ್ ಯೋಜನೆಯಾಗಿದೆ. ಇದರಲ್ಲಿ, ನೀವು ಒಟ್ಟು 50 ಜಿಬಿ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಆದಾಗ್ಯೂ, ಈ ಯೋಜನೆಯಲ್ಲಿ ನೀವು ಕರೆ ಅಥವಾ ಎಸ್ಎಂಎಸ್ ಪ್ರಯೋಜನವನ್ನು ಪಡೆಯುವುದಿಲ್ಲ, ಏಕೆಂದರೆ ಈ ಯೋಜನೆಯನ್ನು ಕೇವಲ ಇಂಟರ್ನೆಟ್ ಪ್ರಯೋಜನಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ವೊಡಾಫೋನ್ನ 251 ರೂಗಳ ಪ್ರಿಪೇಯ್ಡ್ ಯೋಜನೆ ಎಲ್ಲಾ ವಲಯಗಳಿಗೆ ಲಭ್ಯವಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಏರ್ಟೆಲ್ ಕೂಡ 251 ರುಪಾಯಿ ಯೋಜನೆಯಿದ್ದು ನೀವು 50 ಜಿಬಿ ಡೇಟಾವನ್ನು ಸಹ ಪಡೆಯುತ್ತೀರಿ. ಆದಾಗ್ಯೂ, ಏರ್ಟೆಲ್ ಈ ಯೋಜನೆಗೆ ಯಾವುದೇ ಮಾನ್ಯತೆಯನ್ನು ನಿಗದಿಪಡಿಸಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ ಪ್ಯಾಕ್ನ ವ್ಯಾಲಿಡಿಟಿವರೆಗೆ ನಿಮ್ಮ ಯೋಜನೆ ಮುಂದುವರಿಯುತ್ತದೆ. ವೊಡಾಫೋನ್ನಂತೆ, ಈ ಯೋಜನೆಯಲ್ಲಿ ಏರ್ಟೆಲ್ ನಿಮಗೆ ಯಾವುದೇ ಕರೆ ಅಥವಾ ಎಸ್ಎಂಎಸ್ ಪ್ರಯೋಜನಗಳನ್ನು ನೀಡುವುದಿಲ್ಲ. ಅಂದಹಾಗೆ, ನೀವು ಪ್ರತಿದಿನ 2 ಜಿಬಿ ಡೇಟಾದೊಂದಿಗೆ ಕರೆ ಮತ್ತು ಎಸ್ಎಂಎಸ್ ಲಾಭ ಪಡೆಯಲು ಬಯಸಿದರೆ, ಏರ್ಟೆಲ್ 298 ರುಪಾಯಿ ಯೋಜನೆ ನಿಮಗೆ ಉತ್ತಮವಾಗಿರುತ್ತದೆ. ಈ ಯೋಜನೆಯಲ್ಲಿ, ನೀವು 28 ದಿನಗಳವರೆಗೆ ಪ್ರತಿದಿನ 2 ಜಿಬಿ ಡೇಟಾ ಮತ್ತು 100 ಎಸ್ಎಂಎಸ್ ಪಡೆಯುತ್ತೀರಿ. ಹೆಚ್ಚುವರಿಯಾಗಿ, ನೀವು ಅನ್ಲಿಮಿಟೆಡ್ ಕರೆ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.