Ultimate magazine theme for WordPress.

ಉಡುಪಿಯನ್ನು 1 ತಿಂಗಳಲ್ಲಿ ಹಸಿರು ವಲಯ ಮಾಡುತ್ತೇವೆ: ಸುಧಾಕರ್

0

ಉಡುಪಿ, ಜೂನ್ 3: ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಪೈಕಿ 98% ಜನಕ್ಕೆ ರೋಗದ ಲಕ್ಷಣ ಇಲ್ಲ. ವಾರದೊಳಗೆ ಇನ್ನೊಂದು ಪ್ರಯೋಗಾಲಯ ಆರಂಭಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದರು.

ಉಡುಪಿಯಲ್ಲಿ ಕೊರೊನಾ ವೈರಸ್ ಮುಂಜಾಗ್ರತಾ ಸಭೆ ಬಳಿಕ ಮಾತನಾಡಿದ ಅವರು, ನಿರಂತರ ಮಾಸ್ಕ್ ಹಾಕಿದರೆ ಯಾವುದೇ ಅಪಾಯ ಇಲ್ಲ, ಎನ್-95 ಹಾಕಿದರೆ ಉಸಿರಾಟದ ಸಮಸ್ಯೆ ಆಗುತ್ತದೆ, ಮಾಮೂಲಿ ಮಾಸ್ಕ್ ಧರಿಸಿ ಯಾವುದೇ ಅಪಾಯ ಇಲ್ಲವೆಂದರು.

ಉಡುಪಿಯಲ್ಲಿ ಕೊರೊನಾ ವೈರಸ್ ಮಹಾಸ್ಪೋಟವಾಗುತ್ತಿದ್ದು, ಈ ಮೊದಲು 18 ನೇ ಸ್ಥಾನದಲ್ಲಿತ್ತು. ಈಗ ಮೊದಲ ಸ್ಥಾನಕ್ಕೆ ಬಂದಿದೆ, ಒಂದು ತಿಂಗಳಿನಲ್ಲಿ ಜಿಲ್ಲೆಯನ್ನು ಹಸಿರು ವಲಯವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ 9022 ಕೊರೊನಾ ಪರೀಕ್ಷೆ ಆಗಿದ್ದು, 64 ಜನ ಗುಣಮುಖರಾಗಿದ್ದಾರೆ.

ಜನರಿಂದ ಕೊರೊನಾ ವೈರಸ್ ಭಯ ಹೋಗಬೇಕು, ಅದು ಸಾಮಾಜಿಕ ಪಿಡುಗು ಅಲ್ಲ. ಕೊರೊನಾ ವೈರಸ್ ಗಿಂತ ಸಾರ್ಸ್, ಎಬೋಲಾ ಮಾರಕವಾಗಿದ್ದು, ಮನುಷ್ಯ ವೈರಾಣು ವಿರುದ್ಧ ಹೋರಾಡಿ ಗೆಲ್ಲಬೇಕು. ಮಹಾರಾಷ್ಟ್ರದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದ್ದು, ಉಳಿದ 7 ದಿನ ಹೋಮ್ ಕ್ವಾರಂಟೈನ್ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

ವಾರ್ಡ್, ಬೂತ್ ವಾರು ಟಾಸ್ಕ್ ಫೋರ್ಸ್ ಕಮಿಟಿ ರಚನೆ ಮಾಡಿದ್ದು, ಹೊಸ ಸೋಂಕಿತ ವ್ಯಕ್ತಿ ಬಂದಾಗ ವಿವರ ಸಂಗ್ರಹಿಸಲಾಗುವುದು.

Leave A Reply

Your email address will not be published.