Ultimate magazine theme for WordPress.

ಉಕ್ರೇನ್‌ನಲ್ಲಿ ಕೊರೊನಾವೈರಸ್‌ನ 5 ತಳಿಗಳು ಸಕ್ರಿಯ

0

ಉಕ್ರೇನ್, ಡಿಸೆಂಬರ್ 31: ಉಕ್ರೇನ್‌ನಲ್ಲಿ ಕೊರೊನಾವೈರಸ್‌ನ 5 ತಳಿಗಳು ಸಕ್ರಿಯವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಕೆ ಸಂದೇಶ ರವಾನಿಸಿದೆ. ಚೀನಾದಲ್ಲಿ ಕಳೆದ ವರ್ಷ ಹರಡಿದ್ದ ಕೊರೊನಾ ವೈರಾಣು ಈಗಾಗಲೇ ಹಲವು ದೇಶಗಳಲ್ಲಿ ರೂಪಾಂತರಗೊಂಡಿದ್ದು, ಹೊಸ ಆತಂಕ ಸೃಷ್ಟಿಸಿದೆ. ದಕ್ಷಿಣ ಆಫ್ರಿಕಾ, ಬ್ರಿಟನ್ ಗಳಲ್ಲಿ ಪ್ರಮುಖವಾಗಿ ಈ ಹೊಸ ಸೋಂಕು ಕಂಡುಬಂದಿರುವ ಬೆನ್ನಲ್ಲೆ ಉಕ್ರೇನ್ ನಲ್ಲಿ ಹೊಸ ತಳಿಗಳು ಪತ್ತೆಯಾಗಿವೆ.

ಈ ದೇಶದ 9 ಪ್ರದೇಶಗಳಲ್ಲಿ 50 ಪರೀಕ್ಷೆ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ಉಕ್ರೇನ್ ನಲ್ಲಿ ಹರಡುತ್ತಿರುವ ವೈರಾಣು ಜಾಗತಿಕ ಜೆನೆಟಿಕ್ ಲೈನ್ ಬಿ ಗೆ ಸೇರಿದ್ದಾಗಿದ್ದು, ಚೀನಾ ಮೂಲವನ್ನು ಹೊಂದಿದೆ. ಇದರ ಮುಂದುವರೆದ ಭಾಗವಾಗಿ B1; B1.1; B1.1.1; V1.5 ಹಾಗೂ V2 ಪ್ರಬೇಧಗಳು ಕಂಡುಬಂದಿವೆ.

Leave A Reply

Your email address will not be published.