Ultimate magazine theme for WordPress.

ಈ ಮೂರು ರಾಜ್ಯಗಳಲ್ಲಿ ಮೋದಿಗಿಂತ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯ

0

ದೆಹಲಿ, ಜೂನ್ 2: ದೇಶದ ಪ್ರಧಾನಿ ನರೇಂದ್ರ ಮೋದಿ ಉತ್ತಮ ನಾಯಕರಾ ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತಮ ಲೀಡರ್ ಎಂಬ ಚರ್ಚೆ ಹಲವು ವರ್ಷದಿಂದ ನಡೆಯುತ್ತಿದೆ. ಇಡೀ ದೇಶಾದ್ಯಂತ ಮೋದಿ ವರ್ಚಸ್ಸು ಹೆಚ್ಚು ಜನಪ್ರಿಯವಾಗಿದೆ. ಹಾಗಾಗಿಯೇ ಕೇಂದ್ರದಲ್ಲಿ ಎರಡನೇ ಬಾರಿ ಮೋದಿ ಆಡಳಿತ ಬಂದಿದೆ. ಆದರೆ, ಈ ಮೂರು ರಾಜ್ಯದಲ್ಲಿ ಮೋದಿಗಿಂತ ರಾಹುಲ್ ಗಾಂಧಿಯೇ ಹೆಚ್ಚು ಪ್ರಭಾವಿಯಾಗಿದ್ದಾರೆ.

ಪ್ರಸ್ತುತ ಕೊರೊನಾ ವೈರಸ್ ಹಾಗೂ ಲಾಕ್‌ಡೌನ್‌ ಪರಿಸ್ಥಿತಿ ನಿಭಾಯಿಸುವಲ್ಲಿ ಮೋದಿ ವಿಶ್ವದ ಗಮನ ಸೆಳೆದಿದ್ದಾರೆ. ಈ ನಡುವೆ ಸಿ-ವೋಟರ್ ‘ಸ್ಟೇಟ್ ಆಫ್ ದಿ ನೇಷನ್-2020’ ಎಂಬ ಹೆಸರಿನಲ್ಲಿ ಸಮೀಕ್ಷೆ ನಡೆಸಿದೆ. ಕೇಂದ್ರದಲ್ಲಿ ಮೋದಿ ಆಡಳಿತ ವೈಖರಿ ಹೇಗಿದೆ? ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಇಬ್ಬರಲ್ಲಿ ಯಾರು ಹೆಚ್ಚು ಜನಪ್ರಿಯರು ಹಾಗೂ ಯಾವ ರಾಜ್ಯ ಸಿಎಂ ಹೆಚ್ಚು ಪರಿಣಾಮಕಾರಿ ಎಂಬ ಹಲವು ಪ್ರಶ್ನೆಗಳಿಗೆ ಸಮೀಕ್ಷೆ ನಡೆಸಲಾಗಿದೆ.

ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ತಲಾ 3000 ಸಾವಿರ ಜನರನ್ನು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮೋದಿ ಆಡಳಿತವನ್ನು ಶೇಕಡಾ 58.36ರಷ್ಟು ಜನರು ಮೆಚ್ಚಿಕೊಂಡಿದ್ದರೆ, ಶೇಕಡಾ 16.71ರಷ್ಟು ಜನರಿಗೆ ಮೋದಿ ಆಡಳಿತ ಬಗ್ಗೆ ಅಸಮಾಧಾನ ಇದೆ. ಇನ್ನು 24.04ರಷ್ಟು ಕೆಲವು ವಿಚಾರದಲ್ಲಿ ಮಾತ್ರ ಮೋದಿಗೆ ಮೆಚ್ಚುಗೆ ನೀಡಿದ್ದಾರೆ. ಮುಂದೆ ಓದಿ…

Leave A Reply

Your email address will not be published.