ಚೆನ್ನೈ: ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಹಿಟ್ಮ್ಯಾನ್ ರೋಹಿತ್ ಶರ್ಮಾ ಬಲು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ನಲ್ಲಿ ರೋಹಿತ್ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದಾರೆ.
ಕೇಳುವಾಗ ಅಚ್ಚರಿ ಅನ್ನಿಸಬಹುದು. ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಈ ಮೊದಲೇ 36 ಪಂದ್ಯಗಳಲ್ಲಿ 11 ಅರ್ಧ ಶತಕ, 7 ಶತಕ, 1 ದ್ವಿಶತಕ ಬಾರಿಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ದು ಇದೇ ಮೊದಲಬಾರಿ. ಈ ಸಾಧನೆಯನ್ನು ರೋಹಿತ್ 37ನೇ ಪಂದ್ಯದಲ್ಲಿ ಮಾಡಿದ್ದಾರೆ.