ನವದೆಹಲಿ, ಜನವರಿ 22: ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ ” ಅತ್ಯುತ್ತಮ ಇಂಗಾಲ ಡೈಆಕ್ಸೈಡ್ ಸಂಗ್ರಹಿಸುವ ತಂತ್ರಜ್ಞಾನಕ್ಕೆ 100 ಮಿಲಿಯನ್ ಡಾಲರ್ ಬಹುಮಾನವನ್ನು ನೀಡಲು ಯೋಜಿಸಿದ್ದೇನೆ ಎಂದು ಟ್ವಿಟರ್ನಲ್ಲಿ ಘೋಷಿಸಿದ್ದಾರೆ. ಈ ಕುರಿತು ಮುಂದಿನ ವಾರ ಅವರು ಹೆಚ್ಚಿನ ವಿವರಗಳನ್ನು ನೀಡಲಿದ್ದೇನೆ ಎಂದು ಟ್ವೀಟ್ನಲ್ಲಿ ಸೇರಿಸಿದ್ದಾರೆ. ಹೀಗಾಗಿ ಅಂತಹ ಸ್ಪರ್ಧೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೈಗಾರಿಕೆಗಳ ಹೊಗೆ, ಇಂಧನ ಪರಿಷ್ಕರಣೆಯಿಂದ ಉಂಟಾಗುವ ಹೊಗೆ, ವಾಹನಗಳ ಹೊಗೆ ಸೇರಿದಂತೆ ನಾನಾ ರೀತಿಯ ವಾಯು ಮಾಲಿನ್ಯದಿಂದ ಗಾಳಿಗೆ ಸೇರುವ ಇಂಗಾಲವನ್ನು ಹೊರತೆಗೆಯುವ ಬದಲು ಹೊರಸೂಸುವಿಕೆಯನ್ನು ಕಡಿತಗೊಳಿಸುವತ್ತ ಗಮನ ಹರಿಸಲಾಗಿದೆ.
ದೇಶಗಳು ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿಗಳನ್ನು ಪೂರೈಸಬೇಕಾದರೆ ಇಂಗಾಲ ಸೆರೆಹಿಡಿಯುವ ತಂತ್ರಜ್ಞಾನದ ನಿಯೋಜನೆಯಲ್ಲಿ ತೀವ್ರ ಏರಿಕೆ ಅಗತ್ಯ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಕಳೆದ ವರ್ಷದ ಕೊನೆಯಲ್ಲಿ ಹೇಳಿದೆ. ಜಾಗತಿಕ ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವ ಒಂದು ವಿಧಾನ ಇದಾಗಿದೆ.