Ultimate magazine theme for WordPress.

ಆರ್ಥಿಕ ಪ್ಯಾಕೇಜ್ 3ನೇ ಹಂಚಿಕೆ; ಕೃಷಿ ವಲಯಕ್ಕೆ 1 ಲಕ್ಷ ಕೋಟಿ ರೂ.: ನಿರ್ಮಲಾ ಸೀತಾರಾಮನ್ ಘೋಷಣೆ

0

ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ದೇಶದಲ್ಲಿ ಕಂಡು ಕೇಳರಿಯದ ಕಡು ಕಷ್ಟವನ್ನು ಸೃಷ್ಟಿಸಿದ್ದು, ಪರಿಸ್ಥಿತಿಯ ನಿರ್ವಹಣೆಗೆ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ವಿಶೇಷ ಪ್ಯಾಕೇಜ್ ಹಂಚಿಕೆಯ ಬಗ್ಗೆ ಹಂತಹಂತವಾಗಿ ನಿನ್ನೆ ಮತ್ತು ಮೊನ್ನೆ ವಿವರಣೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇಂದು ಇನ್ನೊಂದು ಸುದ್ದಿಗೋಷ್ಠಿ ನಡೆಸಿ ಮತ್ತಷ್ಟು ವಿವರಣೆ ನೀಡಿದರು.

ಸಂಜೆ ನಾಲ್ಕು ಗಂಟೆಗೆ ಸುದ್ದಿಗೋಷ್ಠಿ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿಶೇಷ ಆರ್ಥಿಕ ಪ್ಯಾಕೇಜ್​ನಲ್ಲಿ ಇಂದು ದೇಶದ ಅತಿದೊಡ್ಡ ವಲಯವಾದ ಕೃಷಿ ವಲಯದ ರೈತರು ಹಾಗೂ ಮೀನುಗಾರರು, ಹೈನುಗಾರರಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಇಂದು 11 ಕ್ರಮಗಳನ್ನು ಘೋಷಿಸಲಾಗುವುದು. ಅವುಗಳಲ್ಲಿ ಎಂಟು ಮೂಲಸೌಕರ್ಯ ಹಾಗೂ ಸಾಮರ್ಥ್ಯ ಬಲಪಡಿಸುವುದಕ್ಕೆ ಸಂಬಂಧಿಸಿದ್ದವು ಆಗಿವೆ. ಇವುಗಳ ಉತ್ತೇಜನಕ್ಕೆ ಸರ್ಕಾರ ಹಣ ಹಂಚಿಕೆ ಮಾಡಲಿದೆ. ಉಳಿದ ಮೂರು ಕ್ರಮಗಳು ಸರ್ಕಾರ ಹಾಗೂ ಆಡಳಿತ ಸುಧಾರಣೆಗೆ ಸಂಬಂಧಿಸಿದ್ದವು ಆಗಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.

ಲಾಕ್​ಡೌನ್​ ಅವಧಿಯಲ್ಲಿ ಹಾಲಿನ ಬೇಡಿಕೆ ಶೇ.20-25ರಷ್ಟು ಇಳಿಕೆಯಾಗಿದೆ. 2020-21ರಲ್ಲಿ ಡೈರಿ ಸಹಕಾರಿ ಸಂಸ್ಥೆಗಳಿಗೆ ವಾರ್ಷಿಕ ಶೇ.2 ಬಡ್ಡಿ ದರದಲ್ಲಿ ಆರ್ಥಿಕ ಸಹಾಯ ಒದಗಿರುವ ಹೊಸ ಯೋಜನೆ ಘೋಷಿಸಲಾಗಿದೆ. ಈ ಯೋಜನೆಗೆ 5000 ಹೆಚ್ಚುವರಿ ಹಣ ಮೀಸಲಿಡಲಾಗಿದ್ದು, ಸುಮಾರು 2 ಕೋಟಿ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ವಿತ್ತ ಸಚಿವರು ಹೇಳಿದರು.

ಕೃಷಿ ಉತ್ಪನ್ನಗಳ ಮೂಲಸೌಕರ್ಯ ಯೋಜನೆಗಳಿಗೆ 1 ಲಕ್ಷ ಕೋಟಿ ಧನಸಹಾಯ ಘೋಷಿಸಲಾಗಿದೆ. ಇದರಡಿ ರೈತರ ಕೃಷಿ ಚಟುವಟಿಕೆಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.

ಮೀನುಗಾರರಿಗೆ 20 ಸಾವಿರ ಕೋಟಿ

ಪ್ರಧಾನಮಂತ್ರಿ ಮತ್ಸ್ಥ ಸಂಪದ ಯೋಜನೆ ಮೂಲಕ ಮೀನುಗಾರರಿಗೆ 20 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಸಾಗರ, ಒಳನಾಡು ಮೀನುಗಾರಿಕೆ ಮತ್ತು ಜಲಚರ ಸಾಕಣೆ ಚಟುವಟಿಕೆಗಳಿಗೆ 11,000 ಕೋಟಿ ರೂಪಾಯಿ ಹಾಗೂ ಉಳಿದ 9 ಸಾವಿರ ಕೋಟಿ ರೂ. ಮೀನುಗಾರಿಕೆ ಮೂಲಸೌಕರ್ಯಕ್ಕಾಗಿ ಹಂಚಿಕೆ ಮಾಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

Leave A Reply

Your email address will not be published.