Ultimate magazine theme for WordPress.

ಅಪ್ರಾಪ್ತನಿಂದ ಕಾರು ಚಾಲನೆಗೆ ಮೂವರು ಬಲಿ; ತಂದೆ ಪೊಲೀಸ್‌ ಕಸ್ಟಡಿಗೆ

0

ಮೈಸೂರು, ಡಿಸೆಂಬರ್ 12: ಗುರುವಾರ (ಡಿ.11) ರಾತ್ರಿ ಮೈಸೂರು ಹೊರವಲಯದಲ್ಲಿ ನಡೆದ ಬೈಕ್- ಕಾರು ಅಪಘಾತದಲ್ಲಿ ಮೂವರು ಮೃತಪಟ್ಟಿದ್ದ ಘಟನೆ ನಡೆದಿದ್ದು, ತನಿಖೆ ವೇಳೆ ಆ ಕಾರು ಓಡಿಸುತ್ತಿದ್ದುದು ಬಾಲಕ ಎಂದು ತಿಳಿದುಬಂದಿದೆ. ಇದೀಗ ಬಾಲಕನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆತನ ತಂದೆ ಕಾರು ಮಾರಾಟ ಮಳಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂದಿನಂತೆ ಬಾಲಕನ ತಂದೆ ಗುರುವಾರ ರಾತ್ರಿ 8 ಗಂಟೆಗೆ ಮನೆಗೆ ಬಂದಿದ್ದಾರೆ. ಜೊತೆಗೆ ಮಾರಾಟ ಮಳಿಗೆಯ ಟ್ರಯಲ್ ಕಾರನ್ನು ತಂದಿದ್ದಾರೆ. ಕಾರನ್ನು ಮನೆಯ ಮುಂದೆ ನಿಲ್ಲಿಸಿ ಅನ್ಯ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ತೆರಳಿದ್ದಾರೆ.

ಇದೇ ಸಮಯ ಸಾಧಿಸಿದ ಬಾಲಕ ಕಾರನ್ನು ಚಲಾಯಿಸಿಕೊಂಡು ಬೆಂಗಳೂರು-ಮೈಸೂರು ರಸ್ತೆಗೆ ತೆರಳಿದ್ದಾನೆ. ಆತನ ತಪ್ಪಿನಿಂದ ಅಪಘಾತದಲ್ಲಿ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.

Leave A Reply

Your email address will not be published.