EBM News Kannada
Leading News Portal in Kannada

ಕೊರೋನಾ ಪರಿಹಾರಕ್ಕೆ 1 ಬಿಲಿಯನ್ ಡಾಲರ್‌ ಹಣ ದೇಣಿಗೆ ನೀಡಿದ ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸೆ

ನ್ಯೂಯಾರ್ಕ್‌ (ಏಪ್ರಿಲ್ 09); ಮಾರಣಾಂತಿಕ ಕೊರೋನಾ ವೈರಸ್ ವಿರುದ್ಧ ಹೋರಾಡುವ ಸಲುವಾಗಿ ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಜಾಕ್ ಡಾರ್ಸೆ ತಮ್ಮ ವೈಯಕ್ತಿಕ ಸಂಪತ್ತಿನ 1 ಬಿಲಿಯನ್ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಕೊರೋನಾ ವಿರುದ್ಧದ ಹೋರಾಟಕ್ಕೆ ವ್ಯಕ್ತಿಯೋರ್ವ ನೀಡಿರುವ ಅತಿದೊಡ್ಡ ನೆರವು ಇದಾಗಿದೆ.

ಕೊರೋನಾ ಹೋರಾಟಕ್ಕೆ ನೆರವಾಗುವ ಕುರಿತು ಇಂದು ಸರಣಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ 43 ವರ್ಷದ ಜಾಕ್ ಡಾರ್ಸೆ, “ತಮ್ಮ ಸಂಪತ್ತಿನ ಶೇ.28 ರಷ್ಟು ಈಕ್ವಿಟಿಯನ್ನು ಡಿಜಿಟಲ್ ಪಾವತಿ ಮೂಲಕ ಕೊರೋನಾ ಪರಿಹಾರಕ್ಕೆ ಹೋರಾಡುತ್ತಿರುವ ಸ್ಟಾರ್ಟ್ ಸ್ಮಾಲ್‌ಗೆ ನಾನು ವರ್ಗಾಯಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಜಾಕ್. “ಕೊರೋನಾ ಅಮೆರಿಕದ ಜನ ಜೀವನ ಮತ್ತು ಆರ್ಥಿಕ ವಿನಾಶಕ್ಕೆ ಕಾರಣವಾಗಿದೆ. ಇದಿರಿಂದಾಗುವ ಪರಿಣಾಮ ಊಹೆಗೂ ನಿಲುಕದ್ದು, ಹೀಗಾಗಿ ಇಂತಹ ಸಮಯದಲ್ಲಿ ಸಹಾಯಗಳು ಹಿಂದೆಂತಿಗಿಂತಲೂ ಹೆಚ್ಚು ಅಗತ್ಯವಾಗಿದೆ. ನನ್ನ ಕೆಲಸಗಳು ಇತರರಿಗೆ ಮಾದರಿಯಾಗುತ್ತೆ, ಪ್ರೇರಣೆಯಾಗುತ್ತೆ ಎಂದು ನಾನು ಭಾವಿಸುತ್ತೇನೆ” ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.ಕೊರೋನಾ ವೈರಸ್‌ನಿಂದಾಗಿ ಈಗಾಗಲೇ ವಿಶ್ವದಾದ್ಯಂತ ಸುಮಾರು 88,000 ಸಾವಿರ ಜನ ಮೃತಪಟ್ಟಿದ್ದಾರೆ. ಸುಮಾರು 15 ಲಕ್ಷಕ್ಕೂ ಅಧಿಕ ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಎಲ್ಲಾ ದೇಶಗಳ ಆರ್ಥಿಕತೆ ಕೊರೋನಾದಿಂದಾಗಿ ಪಾತಾಳಕ್ಕೆ ಕುಸಿದಿದ್ದು, ಅನೇಕರು ಸಹಾಯ ಹಸ್ತ ನೀಡುತ್ತಿದ್ದಾರೆ.