EBM News Kannada
Leading News Portal in Kannada

ಗ್ವಾಟೆಮಾಲಾ ಜ್ವಾಲಾಮುಖಿಗೆ 6 ಬಲಿ, 20 ಗಾಯ

ಗ್ವಾಟೆಮಾಲಾ ನಗರ: ಕೇಂದ್ರ ಅಮೆರಿಕದಲ್ಲಿ ಸಕ್ರಿಯಾವಾಗಿರುವ ಜ್ವಾಲಾಮುಖಿಗಳಲ್ಲಿ ಒಂದು ಸ್ಫೋಟಗೊಂಡಿದ್ದು ಇದರಲ್ಲಿ ಆರು ಮಂದಿ ಬಲಿಯಾಗಿದ್ದಾರೆ.

ಗ್ವಾಟೆಮಾಲಾ ನಗರದಿಂದ 44 ಕಿಮೀ ದೂರದಲ್ಲಿರುವ ಜ್ವಾಲಾಮುಖಿ ಸ್ಫೋಟಗೊಂಡಿದ್ದು ಇದರಲ್ಲಿ 6 ಮಂದಿ ಸಾವನ್ನಪ್ಪಿದ್ದು, 20 ಮಂದಿಗೆ ಗಾಯಗೊಂಡಿದ್ದಾರೆ. ಇನ್ನು ಹಲವರು ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಸಂಯೋಜಕ ಸೆರ್ಗಿಯೋ ಕಬಾನಾಸ್ ತಿಳಿಸಿದ್ದಾರೆ.

ಇನ್ನು ಘಟನಾ ಸ್ಥಳದಿಂದ 300ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ಸಂಸ್ಥೆಯ ವಕ್ತಾರ ಡೇವಿಡ್ ಡೇ ಲಿಯೋನ್ ತಿಳಿಸಿದ್ದಾರೆ.