EBM News Kannada
Leading News Portal in Kannada

ಸಿಂಗಾಪುರದ ಆರ್ಕಿಡ್ ಗೆ ಪ್ರಧಾನಿ ನರೇಂದ್ರ ಮೋದಿ ಹೆಸರು

ಸಿಂಗಾಪುರ: ಸಿಂಗಾಪುರದಲ್ಲಿರುವ ರಾಷ್ಟ್ರೀಯ ಆರ್ಕಿಡ್ ಗಾರ್ಡನ್ ನಲ್ಲಿರುವ ವಿಶಿಷ್ಟ ಆರ್ಕಿಡ್ ಪುಷ್ಪಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಸರಿಡಲಾಗಿದೆ.

ಸಿಂಗಾಪುರಕ್ಕೆ ಪ್ರವಾಸದಲ್ಲಿದ್ದಾಗ ಪ್ರಧಾನಿ ಮೋದಿ ಅಲ್ಲಿನ ಆರ್ಕಿಡ್ ಗಾರ್ಡನ್ ಗೆ ಭೇಟಿ ನೀಡಿದ್ದರು. ಈ ಭೇಟಿಯ ಸವಿ ನೆನಪಿಗಾಗಿ ಉಷ್ಣವಲಯದಲ್ಲಿ ಬೆಳೆವ ಆರ್ಕಿಡ್ ಪುಷ್ಪಕ್ಕೆ ’ಡೆಂಡ್ರೋಬ್ರಿಯಮ್‌ ನರೇಂದ್ರ ಮೋದಿ’ ಎಂದು ಹೆಸರನ್ನಿಡಲಾಗಿದೆ.

ಈ ಕುರಿತಂತೆ ಭಾರತ ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರರಆದ ರವೀಶ್‌ ಕುಮಾರ್‌ ಟ್ವೀಟ್ ಮಾಡಿದ್ದಾರೆ. ಈ ಗಿಡವು ಸುಮಾರು 38 ಸೆಂಟಿ ಮೀಟರ್ ಉದ್ದ ಬೆಳೆಯುತ್ತದೆ. 14–20 ಹೂವುಗಳನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.

ಐದು ದಿನಗಳ ಕಾಲ ಮೂರು ರಾಷ್ಟ್ರಗಲ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ಮೋದಿ ಕಡೆಯ ದಿನ ಸಿಂಗಾಪುರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮಾರಿಯಮ್ಮ ದೇವಾಲಯ, ಬೌದ್ಧ ಮಂದಿರ,ಗಳಿಗೆ ಭೇಟಿ ನೀಡಿದ್ದರು.