ಚಾರ್ಜ್ ಫುಲ್ ಆದ್ರೆ ಅಲರಾಂ ಹೊಡೆಯುತ್ತೆ; ಬ್ಯಾಟರಿ ನಿರ್ವಹಣೆಗೆ ಇದುವೇ ಸೂಪರ್ ಆ್ಯಪ್
ಮೊಬೈಲ್ ಬ್ಯಾಟರಿ ನಿರ್ವಹಣೆಗೆ ಹಲವಾರು ಆ್ಯಪ್ಗಳು ಬಂದಿದ್ದು, ಅವುಗಳಲ್ಲಿ ಯಾವುದು ಸೂಕ್ತವಾದ ಆ್ಯಪ್..?, ಯಾವುದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ..?ಎಂಬುದೇ ಗೊಂದಲ. ಆದರೆ, ಮೊಬೈಲ್ ಬ್ಯಾಟರಿಯ ನಿರ್ವಹಣೆಗೆ ಮತ್ತು ಬ್ಯಾಟರಿ ಜೀವಿತಾವಧಿಯನ್ನು ಉಳಿಸಲು ‘ಆ್ಯಕೂ ಬ್ಯಾಟರಿ ಆ್ಯಪ್‘ ಉತ್ತಮ ಎಂಬುದು ಅನೇಕರ ಅಭಿಪ್ರಾಯ.
ಸುರಕ್ಷಿತ ನಿರ್ವಹಣೆ
‘ಆಕ್ಯೂ ಬ್ಯಾಟರಿ ಆ್ಯಪ್‘ ಮೊಬೈಲ್ ಬ್ಯಾಟರಿಯನ್ನು ಸುರಕ್ಷಿತವಾಗಿ ನಿರ್ವಹಿಸುತ್ತದೆ. ಜೊತೆಗೆ ಬ್ಯಾಟರಿ ಕುರಿತ ಮಾಹಿತಿಯನ್ನು ತೋರಿಸುತ್ತದೆ. ವಿವಿಧ ಸ್ಥಿತಿಗಳಲ್ಲಿ ಮೊಬೈಲ್ ಬ್ಯಾಟರಿಯನ್ನು ಹೇಗೆ ಬಳಸಿಕೊಳ್ಳುವುದು ಎಂಬ ಮಾಹಿತಿಯನ್ನು ಒದಗಿಸುತ್ತದೆ.
ಬ್ಯಾಟರಿ ಬಳಕೆಯ ಮಾಹಿತಿ
ಮೊಬೈಲ್ ಬ್ಯಾಟರಿ ಕುರಿತ ಮಾಹಿತಿಯನ್ನು ನೀಡುವುದಲ್ಲದೆ, ಆ್ಯಪ್ನ ಹಿಸ್ಟರಿ ಸೆಕ್ಟರ್ನಲ್ಲಿ ಎಷ್ಟು ಬಾರಿ ಚಾರ್ಜಿಂಗ್ ಮಾಡಿದ್ದೇವೆ ಎಂಬ ಮಾಹಿತಿಯನ್ನು ಒದಗಿಸುತ್ತದೆ.
ಚಾರ್ಜ್ ಎಚ್ಚರಿಕೆ!ಡಿಸ್ಪ್ಲೇ ಮೂಲಕ ಬ್ಯಾಟರಿಯ ಸಾಮರ್ಥ್ಯ, ಬಳಕೆಯ ಮಾಹಿತಿಯನ್ನು ತೋರಿಸುತ್ತದೆ. ಮೊಬೈಲ್ ಚಾರ್ಜ್ ಅಧಿಕವಾದಾಗ ಅಲರಾಂ ಮೂಲಕ ಎಚ್ಚರಿಕೆಯ ಮಾಹಿತಿಯನ್ನು ತಿಳಿಸುತ್ತದೆ. ಅಧಿಕ ಚಾರ್ಜಿಂಗ್ ಬ್ಯಾಟರಿ ಬಾಳಿಕೆಗೆ ಹಾನಿಕಾರಕವಾಗಿರುದರಿಂದ 80% ಚಾರ್ಜ್ ಆದ ಕೂಡಲೆ ಎಚ್ಚರಿಕೆಯ ಅಲರಾಂ ಬಡಿಯುತ್ತದೆ.