ನೀವು ಹೊಸ ಸ್ಮಾಟ್ಫೋನ್ ಖರೀದಿಸುವ ಆಲೋಚನೆಯಲ್ಲಿದ್ದರೆ ಈ ಸ್ಟೋರಿ ತಪ್ಪದೆ ಓದಿ!
ಸ್ಮಾರ್ಟ್ಫೋನ್ ಖರೀದಿಸುತ್ತಿದ್ದೀರಾ? ಹಾಗಿದ್ದರೆ, ಫೋನ್ ಖರೀದಿಸುವ ಮುನ್ನ ಕೆಲ ಸಂಗತಿಗಳನ್ನು ಗಮನದಲಿಟ್ಟುಕೊಳ್ಳುವುದು ಒಳಿತು. ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ಯಾವ ಕಂಪೆನಿಯ ಸ್ಮಾರ್ಟ್ಫೋನ್? ಅದರ ವಿಶೇಷತೆ ಏನು? ತಿಳಿದು ಖರೀದಿಸಿ.
ಕೆಲವೊಮ್ಮೆ ಸ್ಮಾರ್ಟ್ಫೋನ್ ಖರೀದಿಸುವ ಗೋಜಿನಲ್ಲಿ ಅದರ ವಿಶೇಷತೆ? ಕುರಿತು ತಿಳಿಯದೇ ಇರುವುದಿಲ್ಲ. ನಂತರ ತಲೆಕೆಡಿಸಿಕೊಳ್ಳುವ ಪ್ರಸಂಗಗಳು ಎದರುರಾಗುತ್ತದೆ. ಹಾಗಾಗಿ, ಸ್ಮಾರ್ಟ್ಫೋನ್ ಖರೀದಿಗೂ ಮುನ್ನ ಅದರಲ್ಲಿ ಅಳವಡಿಸಿಕೊಂಡಿರುವ ಪ್ರೊಸೆಸರ್, ಬ್ಯಾಟರಿ, ಕ್ಯಾಮೆರಾ, ಸ್ಟೊರೇಜ್ ಮುಂತಾದವುಗಳ ಕುರಿತು ತಿಳಿದು ಕೊಳ್ಳುವುದು ಉತ್ತಮ.
ಸ್ಮಾರ್ಟ್ಫೋನ್ನಲ್ಲಿರುವ ಪ್ರೊಸೆಸರ್ ಅನ್ನು ಜಿಗಾಹರ್ಟ್ಸ್ನಿಂದ ಅಳೆಯಲಾಗುತ್ತದೆ. ಪ್ರೊಸೆಸರ್ ಅಧಾರದ ಮೇಲೆ ನಿಮ್ಮ ಸ್ಮಾರ್ಟ್ಫೋನ್ ಬಳಕೆಯ ವೇಗವನ್ನು ತಿಳಿಯಬಹುದು. ಹೆಚ್ಚಿನ ಸ್ಮಾರ್ಟ್ಫೋನ್ ಬಳಕೆದಾರರು ಸ್ನಾಪ್ ಡ್ರಾಗನ್ 652 ಮತ್ತು ಸ್ನಾಪ್ಡ್ರಾಗನ್ 820/821 ಅಳವಡಿಸಿರುವ ಫೋನ್ ಅನ್ನು ಖರೀದಿಸುತ್ತಾರೆ.
ಬ್ಯಾಟರಿಸ್ಮಾರ್ಟ್ಫೋನ್ ಖರೀದಿಸುವ ಮುನ್ನ ಬ್ಯಾಟರಿಯ ಬಗೆಗೆ ಗಮನ ಹರಿಸಿರಿ. ನಿಮ್ಮ ಸ್ಮಾರ್ಟ್ಪೋನ್ ಅನ್ನು ಹೆಚ್ಚು ಕಾಲ ಬಳಕೆ ಮಾಡಬೇಕಾದರೆ ಅದರಲ್ಲಿ ಅಳವಡಿಸಿರುವ ಬ್ಯಾಟರಿ ಕೂಡ ಒಂದು ಕಾರಣವಾಗುತ್ತದೆ. ಹೆಚ್ಚಿನ ಸ್ಮಾರ್ಟ್ಫೋನ್ಗಳು 3500 ಬ್ಯಾಟರಿ ಅಥವಾ 4245 ಬ್ಯಾಟರಿಯನ್ನು ಅಳವಡಿಸಿರುತ್ತಾರೆ.
ಮೆಮೊರಿ
ಸ್ಮಾರ್ಟ್ಫೋನ್ ಖರೀದಿಗೂ ಮುನ್ನ ಹೆಚ್ಚು ರ‍್ಯಾಮ್ ಮತ್ತು ಸ್ಟೊರೇಜ್ ಹೊಂದಿರುವ ಸ್ಮಾರ್ಟ್ಫೋನ್ಗಳನ್ನು ಖರೀದಿಸಿ. ಕೆಲವೊಮ್ಮೆ ಸ್ಮಾರ್ಟ್ಫೋನ್ನಲ್ಲಿ ಸ್ಟೊರೇಜ್ ಸಮಸ್ಯೆ ಬೇಗ ಉದ್ಭವಿಸುತ್ತದೆ. ಇಂತಹ ಸಮಸ್ಯೆಯನ್ನು ಎದುರಿಸುವ ಮುನ್ನ ಹೆಚ್ಚಿನ ಸ್ಟೊರೇಜ್ವುಳ್ಳ ಮತ್ತು ಅಧಿಕ ಮೆಮೊರಿ ಹೊಂದಿರುವ ಸ್ಮಾರ್ಟ್ಫೋನ್ ಅನ್ನು ಖರೀದಿಸಿ.
ಕ್ಯಾಮೆರಾ
ಸ್ಮಾರ್ಟ್ಫೋನ್ ಖರೀದಿಸುವಾಗ ಅದರಲ್ಲಿರುವ ಕ್ಯಾಮೆರಾದ ಮೇಲೂ ಕಣ್ಣು ಹಾಯಿಸಿ. ಕೆಲವೊಮ್ಮೆ ಕಡಿಮೆ ಬೆಲೆಗೆ ಹೆಚ್ಚಿನ ಮೆಗಾಫಿಕ್ಸೆಲ್ ಹೊಂದಿರುವ ಸ್ಮಾರ್ಟ್ಪೋನ್ಗಳು ಮಾರುಕಟ್ಟೆಯಲ್ಲಿವೆ. ಹಾಗಾಗಿ, ಸ್ಮಾರ್ಟ್ಫೋನ್ ಖರೀದಿಗಾರರು ಫೋನ್ ಅಳವಡಿಸಿಕೊಂಡಿರುವ ಕ್ಯಾಮೆರಾದ ಬಗೆಗೆ ಗಮನಿಸಿ.
ಸ್ಮಾರ್ಟ್ಫೋನ್ ಗುಣಮಟ್ಟ
ಇತ್ತೀಚೆಗೆ ಸ್ಮಾರ್ಟ್ಫೋನ್ ಕಂಪೆನಿಗಳು ತಾವು ತಯಾರರಿಸುತ್ತಿರುವ ಫೋನಿನ ಶೈಲಿಯನ್ನು ಬದಲಾಯಿಸುತ್ತಿದೆ. ಬೇರೆ ಕಂಪೆನಿಗಳಿಗೆ ಪೈಪೋಟಿಯನ್ನು ನೀಡಲು ಸ್ಮಾರ್ಟ್ಫೋನ್ ವೈಶಿಷ್ಟ್ಯದಲ್ಲಿ ಬದಲಾವಣೆಯನ್ನು ತರುತ್ತಿದ್ದಾರೆ. ಹಾಗಾಗಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನದಲ್ಲಿರಿಸಿ ಖರೀದಿಸಿ.