EBM News Kannada
Leading News Portal in Kannada

ಫಿಫಾ ವಿಶ್ವಕಪ್ 2018: 3-0 ಗೋಲಿನಿಂದ ಪನಾಮ ಮಣಿಸಿದ ಬೆಲ್ಜಿಯಂ

ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಜಿ ಗುಂಪಿನ ಪಂದ್ಯದಲ್ಲಿ ಪನಾಮವನ್ನು ಬೆಲ್ಜಿಯಂ 3-0 ಗೋಲುಗಳಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ರೊಮೆಲಾ ಸಿಡಿಸಿದ ಎರಡು ಗೋಲು ಸೇರಿ ಜಗತ್ತಿನ ಮೂರನೇ ಅತ್ಯುತ್ತಮ ತಂಡ ಬೆಲ್ಜಿಯಂ ತಂಡ 3 ಗೋಲುಗಳಿಂದ ಪನಾಮ ವಿರುದ್ಧ ಗೆಲುವು ಸಾಧಿಸಿದೆ.

ಪನಾಮ ಆಕ್ರಮಣಕಾರಿ ಆಟ ಪ್ರದರ್ಶಿಸಿದರು ಸಹ ಬೆಲ್ಜಿಯಂ ವಿರುದ್ಧ ಒಂದು ಗೋಲನ್ನು ಬಾರಿಸಲು ಸಾಧ್ಯವಾಗಲಿಲ್ಲ.