EBM News Kannada
Leading News Portal in Kannada

ಫಿಫಾ ವಿಶ್ವಕಪ್ 2018: ಹಾಲಿ ಚಾಂಪಿಯನ್ ಜರ್ಮನಿ ವಿರುದ್ಧ ಮೆಕ್ಸಿಕೋಗೆ ಐತಿಹಾಸಿಕ ಗೆಲುವು

ಮಾಸ್ಕೊ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಮೆಕ್ಸಿಕೋ ವಿರುದ್ಧ ಪರಾಭವಗೊಂಡಿದೆ.

ಪಂದ್ಯಾವಳಿಯ ಎಫ್ ಗುಂಪಿನ ಪೈಕಿ ಇಂದು ನಡೆದ ಜರ್ಮನಿ ಮತ್ತು ಮೆಕ್ಸಿಕೋ ನಡುವಿನ ಪಂದ್ಯದಲ್ಲಿ ಮೆಕ್ಸಿಕೋ 1-0 ಗೋಲಿನಿಂದ ಗೆಲುವು ಸಾಧಿಸಿದೆ.

ಮೆಕ್ಸಿಕೋದ ಹಿರ್ವಿಂಗ್ ಲೊಜಾನೊ 35ನೇ ನಿಮಿಷದಲ್ಲಿ ಗೋಲು ಸಿಡಿಸಿದ್ದು ತಂಡ ಗೆಲುವು ಸಾಧಿಸಿದೆ.

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿ ವಿರುದ್ಧ ಮೆಕ್ಸಿಕೋ ತಂಡದ ಎರಡನೇ ಗೆಲುವು ಇದಾಗಿದೆ. 1982ರ ಫಿಫಾ ವಿಶ್ವಕಪ್ ಪಂದ್ಯವೊಂದರಲ್ಲಿ ಮೆಕ್ಸಿಕೋ ಜರ್ಮನಿ ವಿರುದ್ಧ ಗೆಲುವು ಸಾಧಿಸಿತ್ತು.